ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ರಾಯಿಟರ್ಸ್ ಚಿತ್ರ
ವಾಷಿಂಗ್ಟನ್: ಭಾರತ ಹಾಗೂ ರಷ್ಯಾದ ವಿರುದ್ಧ ತೀವ್ರ ಕಿಡಿಕಾರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಎರಡು ರಾಷ್ಟ್ರಗಳು ನಿಕಟ ಬಾಂಧವ್ಯ ಹೊಂದಿರುವ ಕುರಿತು ನಾವು ಹೆದರುವುದಿಲ್ಲ ಎಂದು ತಿಳಿಸಿದ್ದಾರೆ.
ಎರಡು ರಾಷ್ಟ್ರಗಳು ಆರ್ಥಿಕತೆಯು ನಿರ್ಜೀವ ಆರ್ಥಿಕತೆಯಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದ ಫೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಭಾರತದ ಮೇಲೆ ಶೇಕಡಾ 25ರಷ್ಟು ಸುಂಕ ಹೇರಿದ ಬೆನ್ನಲ್ಲೇ ಈ ಪ್ರತಿಕ್ರಿಯೆ ನೀಡಿದ್ದಾರೆ.
‘ರಷ್ಯಾ ಜೊತೆಗೆ ಭಾರತವು ಏನು ಮಾಡುತ್ತದೆ ಎಂಬ ವಿಚಾರಕ್ಕೆ ನಾವು ಹೆದರಲ್ಲ. ಎರಡು ರಾಷ್ಟ್ರಗಳು ನಿರ್ಜೀವ ಜಕತೆಯಾಗಿದ್ದು, ಒಟ್ಟಿಗೆ ನೆಲಕಚ್ಚಲಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ನಾವು ಭಾರತದೊಂದಿಗೆ ಅತೀ ಕಡಿಮೆ ವ್ಯವಹಾರ ಮಾಡುತ್ತಿದ್ದೇವೆ, ಆದರೂ ಅಲ್ಲಿನ ಸುಂಕ ಹೆಚ್ಚಿದ್ದು, ವಿಶ್ವದಲ್ಲೇ ಅತೀ ಹೆಚ್ಚಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.