ADVERTISEMENT

ಐರ್ಲೆಂಡ್‌: ಭಾರತೀಯ ಕುಟುಂಬಕ್ಕೆ ಜನಾಂಗೀಯ ನಿಂದನೆ

ಪ್ರವಾಸಕ್ಕೆಂದು ಐರ್ಲೆಂಡ್‌ಗೆ ತೆರಳಿದ್ದ ಕುಟುಂಬ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 20:08 IST
Last Updated 21 ಜೂನ್ 2019, 20:08 IST

ಲಂಡನ್‌: ಪ್ರವಾಸಕ್ಕೆಂದು ಐರ್ಲೆಂಡ್‌ಗೆ ತೆರಳಿದ್ದ ಭಾರತೀಯಕುಟುಂಬದ ಸದಸ್ಯರನ್ನು ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಜನಾಂಗೀಯ ನಿಂದನೆಗೈದಿದ್ದಾನೆ.

ಪ್ರಸುನ್‌ ಭಟ್ಟಚಾರ್ಜಿ ತಮ್ಮ ಕುಟುಂಬದೊಂದಿಗೆ ಮೂರು ದಿನಗಳ ಪ್ರವಾಸಕ್ಕೆ ಐರ್ಲೆಂಡಿಗೆ ತೆರಳಿದ್ದರು.ಬೆಲ್‌ಫಾಸ್ಟ್‌ನಿಂದ ಡಬ್ಲಿನ್‌ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಸಹ ಪ್ರಯಾಣಿಕ ಇವರ ಮಾತಿನ ಶೈಲಿ, ಚರ್ಮದ ಬಣ್ಣ, ರಾಷ್ಟ್ರೀಯತೆಯ ವಿಷಯ ತೆಗೆದು ನಿಂದನೆಗೈದಿದ್ದಾನೆ ಎಂದು ಐರಿಷ್‌ ಟೈಮ್ಸ್‌ ವರದಿ ಮಾಡಿದೆ.

‘ಬೋಗಿಗೆ ರೈಲ್ವೆ ಭದ್ರತಾ ಸಿಬ್ಬಂದಿ ಬಂದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ’ ಎಂದು ಪ್ರಸುನ್ ತಿಳಿಸಿದ್ದಾರೆ. ‘ಆರೋಪಿ ಪತ್ತೆಗಾಗಿಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪೊಲೀಸರಿಗೆ ನೀಡಿದ್ದೇವೆ' ಎಂದು ಐರಿಷ್‌ ರೈಲ್ವೆ ವಕ್ತಾರ ಬ್ಯಾರಿ ಕೆನ್ನಿ ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.