ADVERTISEMENT

ಸಾಲಕ್ಕಾಗಿ ನಕಲಿ ದಾಖಲೆ ಸಲ್ಲಿಕೆ: ಭಾರತ ಮೂಲದ ಮಹಿಳೆಗೆ ಸಿಂಗಪುರದಲ್ಲಿ ಸಜೆ

ಪಿಟಿಐ
Published 29 ಆಗಸ್ಟ್ 2022, 10:46 IST
Last Updated 29 ಆಗಸ್ಟ್ 2022, 10:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಿಂಗಪುರ: ಸಾಲವನ್ನು ಪಡೆಯಲು ನಕಲಿ ದಾಖಲೆಯನ್ನು ನೀಡಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಭಾರತ ಮೂಲದ 29 ವರ್ಷದ ಗೃಹಿಣಿಗೆ ಸ್ಥಳೀಯ ನ್ಯಾಯಾಲಯ ಆರು ತಿಂಗಳ ಸಜೆ ವಿಧಿಸಿದೆ.

ಕಿರಣ್‌ ಕೌರ್ ಶಿಕ್ಷೆಗೆ ಗುರಿಯಾದವರು. ನಿರುದ್ಯೋಗಿ ಮಹಿಳೆಗೆ ಹಣಕಾಸು ಸಮಸ್ಯೆ ಇತ್ತು. ‘ಕ್ಷಿಪ್ರ ಸಾಲ’ ಜಾಹೀರಾತು ಆಧರಿಸಿ ವಾಟ್ಸ್‌ಆ್ಯಪ್‌ ಮೂಲಕ ಚಾರ್ಲ್ಸ್‌ ಎಂಬಾತನ ನೆರವು ಪಡೆದು ಅರ್ಜಿ ಸಲ್ಲಿಸಿದ್ದರು.

ಆದರೆ, ಸಾಲ ಪಡೆಯಲು ಆದಾಯ ಮೂಲ ತೋರಿಸುವ ಅಗತ್ಯವಿಲ್ಲ ಎಂದು ಹೇಳಿದ್ದ ಆತ ಸಾಲ ಪಡೆಯಲು ನೆರವಾಗಿದ್ದ. ಆದರೆ, ಮಹಿಳೆಯು ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ದಾಖಲೆಯನ್ನು ನೀಡಲಾಗಿತ್ತು. ಇಂತದೇ ಪ್ರಕರಣದಲ್ಲಿ ನ್ಯಾಯಾಲಯವು ಇತರೆ 12 ಮಂದಿಗೂ ಶಿಕ್ಷೆ ವಿಧಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.