ADVERTISEMENT

ಚೀನಾ ಪ್ರಜೆಗಳಿಗೆ ಪ್ರವಾಸಿ ವೀಸಾ; 5 ವರ್ಷದ ಬಳಿಕ ಪ್ರಕ್ರಿಯೆ ಪುನರಾರಂಭಿಸಿದ ಭಾರತ

ಪಿಟಿಐ
Published 23 ಜುಲೈ 2025, 10:46 IST
Last Updated 23 ಜುಲೈ 2025, 10:46 IST
<div class="paragraphs"><p>ಭಾರತ-ಚೀನಾ</p></div>

ಭಾರತ-ಚೀನಾ

   

ಬೀಜಿಂಗ್: ಚೀನಾ ಪ್ರಜೆಗಳಿಗೆ ಪ್ರವಾಸಿ ವೀಸಾ ನೀಡುವ ಪ್ರಕ್ರಿಯೆಯನ್ನು ಭಾರತ ಮರು ಆರಂಭಿಸಿದೆ.

2020ರಲ್ಲಿ ಕೋವಿಡ್‌–19 ಕಾರಣದಿಂದಾಗಿ ಚೀನಾ ಪ್ರಜೆಗಳಿಗೆ ಪ್ರವಾಸಿ ವೀಸಾ ನೀಡುವುದನ್ನು ಭಾರತ ರದ್ದುಗೊಳಿಸಿತ್ತು, ಕೋವಿಡ್‌ ಬಳಿಕ ಪೂರ್ವ ಲಡಾಖ್‌ ಗಡಿಯ ವಿಚಾರವಾಗಿ ವೀಸಾ ನಿರ್ಬಂಧ ಮುಂದುವರಿದಿತ್ತು. 

ADVERTISEMENT

ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ವಾರದಿಂದ ಚೀನಾ ಪ್ರಜೆಗಳು ಭಾರತದ ಪ್ರವಾಸಿ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ. 

ಬೀಜಿಂಗ್, ಶಾಂಘೈ ಮತ್ತು ಗುವಾಂಗ್‌ಝೌನಲ್ಲಿರುವ ಆಯಾ ಭಾರತೀಯ ವೀಸಾ ಅರ್ಜಿ ಕೇಂದ್ರಗಳಲ್ಲಿ ವೀಸಾಗಳಿಗೆ ಅರ್ಜಿ ಸಲ್ಲಿಸಬಹುದು. ಇದಕ್ಕೆ ಅಗತ್ಯವಿರುವ ಕಾರ್ಯವಿಧಾನಗಳು ಮತ್ತು ದಾಖಲೆಗಳ ಕುರಿತು ಕಚೇರಿಯು ಪ್ರಕಟಣೆ ಹೊರಡಿಸಿದೆ.

ಇದೀಗ ಗಾಲ್ವಾನ್ ಕಣಿವೆಯಲ್ಲಿ ನಡೆದ ಮಿಲಿಟರಿ ಘರ್ಷಣೆಯ ನಂತರ ತೀವ್ರ ಹದಗೆಟ್ಟ ದ್ವಿಪಕ್ಷೀಯ ಸಂಬಂಧಗಳನ್ನು ಸರಿಪಡಿಸುವ ಪ್ರಯತ್ನಗಳ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್‌ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಜತೆಗೆ ಮಾತುಕತೆ ನಡೆಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಶಾಂಘೈ ಕೋಆಪರೇಷನ್‌ ಸಂಸ್ಥೆ ಆಯೋಜಿಸಿದ್ದ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಜುಲೈ 14, 15 ರಂದು ಜೈಶಂಕರ್‌ ಚೀನಾಕ್ಕೆ ಭೇಟಿ ನೀಡಿದ್ದರು ಈ ವೇಳೆ ಯಿ ಜತೆಗೆ ಮಾತುಕತೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.