ADVERTISEMENT

ಸೇನಾ ಆಸ್ಪತ್ರೆ ಮೇಲೆ ಇರಾನ್ ದಾಳಿ: ಭಾರಿ ಬೆಲೆ ತೆರಬೇಕಾಗುತ್ತದೆ ಎಂದ ನೆತನ್ಯಾಹು

ಏಜೆನ್ಸೀಸ್
Published 19 ಜೂನ್ 2025, 10:35 IST
Last Updated 19 ಜೂನ್ 2025, 10:35 IST
ಬೆಂಜಮಿನ್ ನೆತನ್ಯಾಹು
ಬೆಂಜಮಿನ್ ನೆತನ್ಯಾಹು   

ಜೆರುಸಲೇಂ: ‘ಇದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ’

– ದಕ್ಷಿಣ ಇಸ್ರೇಲ್‌ನ ಸೇನಾ ಆಸ್ಪತ್ರೆ ಮೇಲೆ ಗುರುವಾರ ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಕ್ರಿಯಿಸಿದ ಪರಿ ಇದು.

ಇದಕ್ಕೆ ಇರಾರ್‌ನ ಪರಮೋಚ್ಚ ನಾಯಕನನ್ನು ಉತ್ತರದಾಯಿಯನ್ನಾಗಿ ಮಾಡಲಾಗುವುದು ಎಂದು ಇಸ್ರೇಲ್ ರಕ್ಷಣಾ ಸಚಿವ ಹೇಳಿದ್ದಾರೆ.

ADVERTISEMENT

‘ಇಂದು ಮುಂಜಾನೆ ಇರಾನ್‌ನ ಭಯೋತ್ಪಾದಕ ಸರ್ವಾಧಿಕಾರಿಗಳು ಸೊರೊಕ ಆಸ್ಪತ್ರೆ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾರೆ. ದೇಶದ ಕೇಂದ್ರ ಭಾಗದಲ್ಲಿ ನಾಗರಿಕರ ಮೇಲೂ ದಾಳಿ ನಡೆದಿದೆ. . ಟೆಹರಾನ್‌ನಲ್ಲಿರುವ ದಾಳಿಕೋರರು ಇದಕ್ಕೆ ಭಾರಿ ಬೆಲೆ ತೆರುವಂತೆ ಮಾಡುತ್ತೇವೆ’ ಎಂದು ನೇತನ್ಯಾಹು ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.‌

ಇಸ್ರೇಲ್‌ನ ಸೊರೊಕ ವೈದ್ಯಕೀಯ ಕೇಂದ್ರದ ಕಟ್ಟಡದ ಮೇಲೆ ಗುರುವಾರ ಇರಾನ್‌ ಕ್ಷಿಪಣಿ ದಾಳಿ ನಡೆಸಿತ್ತು. ಪರಿಣಾಮ ಕಟ್ಟಡದ ಒಳಗಿದ್ದ ಹಲವರು ಗಾಯಗೊಂಡಿದ್ದು, ಭಾರಿ ಹಾನಿಯುಂಟಾಗಿತ್ತು.

ವರದಿಗಳ ಪ್ರಕಾರ ದಾಳಿಯಲ್ಲಿ ಕನಿಷ್ಠ 47 ಮಂದಿ ಗಾಯಗೊಂಡಿದ್ದಾರೆ. ಸರೋಕಾ ವೈದ್ಯಕೀಯ ಕೇಂದ್ರ ಇಸ್ರೇಲ್‌ನಲ್ಲಿನ ಅತಿದೊಡ್ಡ ಆಸ್ಪತ್ರೆಯಾಗಿದೆ.

ಕ್ಷಿಪಣಿ ದಾಳಿಯಾದ ಸಂದರ್ಭದಲ್ಲಿ ಆಸ್ಪತ್ರೆಯ ಒಳಗೆ ಉಂಟಾದ ತಲ್ಲಣದ ದೃಶ್ಯಗಳ ವಿಡಿಯೊಗಳನ್ನು ಇಸ್ರೇಲಿ ಮಾಧ್ಯಮಗಳಲ್ಲಿ ಬಿತ್ತರಿಸಲಾಗಿದೆ. ಹಾರಿಹೋದ ಕಿಟಕಿಗಳು, ಕಟ್ಟಡದ ಒಳಗೆ ದಟ್ಟವಾದ ಕಪ್ಪು ಹೊಗೆ ಆವರಿಸಿರುವುದು, ಜನರು, ವೈದ್ಯರು ಭಯದಿಂದ ದಿಕ್ಕಾಪಾಲಾಗಿ ಓಡುವ ದೃಶ್ಯಗಳು ವಿಡಿಯೊದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.