ADVERTISEMENT

Israel-Iran Tensions: ಇಸ್ರೇಲ್‌ ಮೇಲೆ ಇರಾನ್‌ನಿಂದ ಪ್ರತಿದಾಳಿ

ಏಜೆನ್ಸೀಸ್
Published 28 ಫೆಬ್ರುವರಿ 2026, 9:07 IST
Last Updated 28 ಫೆಬ್ರುವರಿ 2026, 9:07 IST
   

ಟೆಲ್‌ ಅವೀವ್: ಇಸ್ರೇಲ್‌ ದಾಳಿಗೆ ಪ್ರತಿಯಾಗಿ ಇರಾನ್‌, ಇಸ್ರೇಲ್‌ ರಾಜಧಾನಿ ಟೆಲ್‌ ಅವೀವ್‌ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.

ಇರಾನ್‌ ದಾಳಿಯನ್ನು ಇಸ್ರೇಲ್‌ ರಕ್ಷಣಾ ಪಡೆ(ಐಡಿಎಫ್‌) ಖಚಿತಪಡಿಸಿದೆ.

‘ಸ್ವಲ್ಪ ಸಮಯದ ಹಿಂದೆ ಇಸ್ರೇಲ್‌ ಕಡೆಗೆ ಇರಾನ್‌ ಕ್ಷಿಪಣಿಗಳು ಬರುತ್ತಿರುವುದನ್ನು ನಾವು ಗುರುತಿಸಿದ್ದೇವೆ. ಇರಾನ್‌ ಬೆದರಿಕೆಯನ್ನು ತಡೆಯಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ದಾಳಿ ನಡೆಯುವ ಪ್ರದೇಶಗಳಲ್ಲಿನ ಮೊಬೈಲ್ ಫೋನ್‌ಗಳಿಗೆ ಮುನ್ನೆಚ್ಚರಿಕೆ ಸಂದೇಶಗಳನ್ನು ಹೋಮ್ ಫ್ರಂಟ್ ಕಮಾಂಡ್ ಕಳುಹಿಸುತ್ತಿದೆ’ ಎಂದು ಐಡಿಎಫ್‌ ಎಕ್ಸ್‌ನಲ್ಲಿ ತಿಳಿಸಿದೆ.

ADVERTISEMENT

ಇರಾನ್‌ ಮೇಲೆ ದಾಳಿ ನಡೆಸಿರುವ ಇಸ್ರೇಲ್‌, ಮುಂಜಾಗ್ರತಾ ಕ್ರಮವಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ. ಬಾಂಬ್ ಶೆಲ್ಟರ್‌ಗಳಲ್ಲಿ ರಕ್ಷಣೆ ಪಡೆಯುವಂತೆ ತನ್ನ ನಾಗರಕರಿಗೆ ಸೂಚಿಸಿದೆ.

ಏತನ್ಮಧ್ಯೆ, ಯುದ್ಧ ಭೀತಿ ಹಿನ್ನೆಲೆ ಇರಾಕ್‌ ತನ್ನ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಪರಮಾಣು ಒಪ್ಪಂದಕ್ಕೆ ಇರಾನ್‌ ಸ್ಪಂದಿಸದ ಕಾರಣ ಅಮೆರಿಕ ಮತ್ತು ಇಸ್ರೇಲ್‌ ಜಂಟಿಯಾಗಿ ಇಂದು(ಶನಿವಾರ) ಇರಾನ್‌ ಮೇಲೆ ದಾಳಿ ನಡೆಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.