ವ್ಲಾಡಿಮಿರ್ ಪುಟಿನ್
(ರಾಯಿಟರ್ಸ್ ಚಿತ್ರ)
ಮಾಸ್ಕೊ: ಇರಾನ್‌ನ ಪರಮಾಣು ಘಟಕಗಳ ಮೇಲೆ ಅಮೆರಿಕ ನಡೆಸಿದ ಬಾಂಬ್ ದಾಳಿಯ ಬಳಿಕವೂ ಇರಾನ್‌ಗೆ ರಕ್ಷಣೆ ಹಾಗೂ ಸಹಾಯ ಏಕೆ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರತಿಕ್ರಿಯಿಸಿದ್ದಾರೆ.
ದಶಕಗಳಿಂದಲೂ ರಷ್ಯಾ ಮತ್ತು ಇರಾನ್ ನಿಕಟ ಸಂಬಂಧವನ್ನು ಹೊಂದಿದ್ದರೂ, ಇಸ್ರೇಲ್‌ನಲ್ಲಿ ಹೆಚ್ಚಿನ ಸಂಖ್ಯೆಯ ರಷ್ಯನ್ ಮಾತನಾಡುವ ಜನರು ವಾಸಿಸುತ್ತಿರುವುದರಿಂದ ಈ ಸಂಘರ್ಷದಲ್ಲಿ ತಟಸ್ಥವಾಗಿರಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಸೇಂಟ್ ಪೀಟರ್ಸ್‌ಬರ್ಗ್ ಇಂಟರ್‌ನ್ಯಾಷನಲ್ ಎಕಾನಮಿಕ್ ಫಾರಂನಲ್ಲಿ ಪುಟಿನ್ ಈ ಕುರಿತು ಪ್ರತಿಕ್ರಿಯಿಸಿದ್ದು, 'ಓಪನ್ ಸೋರ್ಸ್ ಇಂಟೆಲ್' ವಿಡಿಯೊ ಹಂಚಿಕೊಂಡಿದೆ.
'ಇಸ್ರೇಲ್‌ನಲ್ಲಿ ಸೋವಿಯತ್ ಒಕ್ಕೂಟ ಹಾಗೂ ರಷ್ಯಾ ಒಕ್ಕೂಟದ ಸುಮಾರು ಎರಡು ಮಿಲಿಯನ್ ಜನರು ವಾಸಿಸುತ್ತಿದ್ದಾರೆ ಎಂಬ ಅಂಶದ ಬಗ್ಗೆ ನಿಮ್ಮ ಗಮನ ಸೆಳೆಯಲು ಬಯಸುತ್ತೇನೆ. ಇಸ್ರೇಲ್ ಇಂದು ಬಹುತೇಕ ರಷ್ಯನ್ ಮಾತನಾಡುವ ದೇಶವಾಗಿದೆ. ರಷ್ಯಾದ ಸಮಕಾಲೀನ ಇತಿಹಾಸದಲ್ಲಿ ನಾವು ಅದನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ' ಎಂದು ಹೇಳಿದ್ದಾರೆ.
ಮಿತ್ರರಾಷ್ಟ್ರಗಳ ಕುರಿತು ರಷ್ಯಾದ ನಿಷ್ಠೆಯ ಕುರಿತು ಕೇಳಿದಾಗ, 'ದೀರ್ಘಕಾಲದಿಂದ ಅರಬ್ ರಾಷ್ಟ್ರಗಳು ಮತ್ತು ಇಸ್ಲಾಮಿಕ್ ರಾಷ್ಟ್ರಗಳೊಂದಿಗೆ ರಷ್ಯಾದ ಸಂಬಂಧ ಸ್ನೇಹಪರವಾಗಿದೆ. ರಷ್ಯಾದ ಜನಸಂಖ್ಯೆಯ ಶೇ 15ರಂದು ಜನರು ಮುಸ್ಲಿಮರು ಆಗಿದ್ದಾರೆ' ಎಂದು ಅವರು ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.