ADVERTISEMENT

'ಮಿ.ಟ್ರಂಪ್ ನೀವು ಆರಂಭಿಸಿದ್ದೀರಿ, ನಾವು ಅಂತ್ಯಗೊಳಿಸುತ್ತೇವೆ': ಇರಾನ್ ಮಾಧ್ಯಮ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜೂನ್ 2025, 7:27 IST
Last Updated 22 ಜೂನ್ 2025, 7:27 IST
<div class="paragraphs"><p>ಇರಾನ್ ಮಾಧ್ಯಮದಲ್ಲಿ ಅಮೆರಿಕಕ್ಕೆ ಎಚ್ಚರಿಕೆ</p></div>

ಇರಾನ್ ಮಾಧ್ಯಮದಲ್ಲಿ ಅಮೆರಿಕಕ್ಕೆ ಎಚ್ಚರಿಕೆ

   

(ಸ್ಕ್ರೀನ್‌ಶಾಟ್)

ಟೆಹರಾನ್: 'ಮಿ. ಟ್ರಂಪ್, ನೀವು ಆರಂಭಿಸಿದ್ದೀರಿ, ನಾವು ಅಂತ್ಯಗೊಳಿಸುತ್ತೇವೆ' -

ADVERTISEMENT

ಅಣ್ವಸ್ತ್ರ ಕೇಂದ್ರಗಳನ್ನು ಗುರಿಯಾಗಿಸಿ ಅಮೆರಿಕ ನಡೆಸಿದ ದಾಳಿಯ ಬೆನ್ನಲ್ಲೇ ಇರಾನ್‌ನ ಸ್ಟೇಟ್ ಮೀಡಿಯಾ ನೀಡಿದ ಎಚ್ಚರಿಕೆ ಇದಾಗಿದೆ.

'ಈಗ ಅಮೆರಿಕದ ಪ್ರತಿಯೊಬ್ಬ ನಾಗರಿಕ ಹಾಗೂ ಮಿಲಿಟರಿ ಸಿಬ್ಬಂದಿ ಇರಾನ್‌ನ ಗುರಿಯಾಗಲಿದ್ದಾರೆ' ಎಂದೂ ಇರಾನ್‌ನ ಸರ್ಕಾರಿ ಮಾಧ್ಯಮ ಎಚ್ಚರಿಸಿದೆ.

ಪ್ರಸ್ತುತ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

'ಇರಾನ್‌ನ ವಾಯುಪ್ರದೇಶವನ್ನು ಉಲ್ಲಂಘಿಸುವ ಮೂಲಕ ಅಮೆರಿಕ ಅತಿ ದೊಡ್ಡ ಅಪರಾಧ ಎಸಗಿದೆ. ಪಶ್ಚಿಮ ಏಷ್ಯಾದಲ್ಲಿ ಅದಕ್ಕೆ ಯಾವುದೇ ಸ್ಥಾನವಿಲ್ಲ. ಅಮೆರಿಕದ ಅಧ್ಯಕ್ಷರೇ, ನೀವು ಆರಂಭಿಸಿದ್ದೀರಿ, ನಾವು ಕೊನೆಗಾಣಿಸುತ್ತೇವೆ' ಎಂದು ಇರಾನ್‌ನ ಸರ್ಕಾರಿ ಮಾಧ್ಯಮದಲ್ಲಿ ನಿರೂಪಕರು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ವಿಡಿಯೊದಲ್ಲಿ ಅಮೆರಿಕದ ನೆಲೆಗಳನ್ನು ಗುರಿಯಾಗಿಸುವ ಗ್ರಾಫಿಕ್ಸ್ ಅನ್ನು ಪ್ರಸಾರ ಮಾಡಲಾಯಿತು.

ಇರಾನ್‌ನ ಮೂರು ಅಣು ಕೇಂದ್ರಗಳನ್ನು ಬಾಂಬ್ ದಾಳಿ ನಡೆಸಿ ನಾಶಪಡಿಸಲಾಗಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು. ಆ ಮೂಲಕ ಇಸ್ರೇಲ್-ಇರಾನ್ ಸಂಘರ್ಷದಲ್ಲಿ ಅಮೆರಿಕ ನೇರ ಮಧ್ಯಪ್ರವೇಶ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.