ADVERTISEMENT

ಗಾಜಾ ಮೇಲೆ ಇಸ್ರೇಲ್‌ ದಾಳಿ: 40 ಮಂದಿ ಪ್ಯಾಲೆಸ್ಟೀನಿಯನ್ನರ ಸಾವು

ರಾಯಿಟರ್ಸ್
Published 12 ಸೆಪ್ಟೆಂಬರ್ 2025, 13:58 IST
Last Updated 12 ಸೆಪ್ಟೆಂಬರ್ 2025, 13:58 IST
   

ಕೈರೊ: ಇಸ್ರೇಲ್‌ ಪಡೆಗಳು ಗಾಜಾ ಪಟ್ಟಿ ಮೇಲೆ ಶುಕ್ರವಾರ ನಡೆಸಿದ ದಾಳಿಯಲ್ಲಿ 40 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ.

ಹಮಾಸ್‌ ಬಂಡುಕೋರರನ್ನು ನಾಶ ಮಾಡುವ ಭಾಗವಾಗಿ, 10 ಲಕ್ಷಕ್ಕೂ ಹೆಚ್ಚಿನ ಜನರು ಆಶ್ರಯ ಪಡೆದಿರುವ ಪಾಳುಬಿದ್ದ ನಗರದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವ ಉದ್ದೇಶದಿಂದ ಇಸ್ರೇಲ್‌ ತನ್ನ ದಾಳಿಯನ್ನು ತೀವ್ರಗೊಳಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಬೇರೆಡೆಗೆ ಸ್ಥಳಾಂತರಗೊಳ್ಳುವಂತೆ ಇಸ್ರೇಲ್‌ ಹೊರಡಿಸಿದೆ. ಆದರೆ, ಅವರಿಗೆ ಹೋಗಲು ಎಲ್ಲಿಯೂ ಸುರಕ್ಷಿತ ಸ್ಥಳ ಸಿಗುತ್ತಿಲ್ಲ. ಹೀಗಾಗಿ ತೆರವು ಆದೇಶದ ಹೊರತಾಗಿಯೂ ಅನೇಕ ನಿವಾಸಿಗಳು ಗಾಜಾ ನಗರದಲ್ಲೇ ಉಳಿದುಕೊಂಡಿದ್ದಾರೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಗಾಜಾ ನಗರದಿಂದ ಪ್ಯಾಲೆಸ್ಟೀನಿಯನ್ನರ ಸ್ಥಳಾಂತರಿಸುವ ಕುರಿತು ಆದೇಶ ಹೊರಡಿಸಿರುವ ಇಸ್ರೇಲ್‌ ಕ್ರಮವನ್ನು ವಿಶ್ವಸಂಸ್ಥೆ ಹಾಗೂ ಅನೇಕ ದೇಶಗಳು ಖಂಡಿಸಿದ್ದು, ಕದನ ವಿರಾಮ ಘೋಷಿಸುವಂತೆ ಒತ್ತಾಯಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.