ADVERTISEMENT

Israel Gaza War | ಗಾಜಾ ಮೇಲೆ ಇಸ್ರೇಲ್‌ ದಾಳಿ: 25 ಮಂದಿ ಸಾವು

ಏಜೆನ್ಸೀಸ್
Published 23 ಆಗಸ್ಟ್ 2025, 14:05 IST
Last Updated 23 ಆಗಸ್ಟ್ 2025, 14:05 IST
   

ಖಾನ್‌ ಯೂನಿಸ್: ಗಾಜಾ ಪಟ್ಟಿಯ ವಿವಿಧ ಸ್ಥಳಗಳ ಮೇಲೆ ಇಸ್ರೇಲ್‌ ಪಡೆಗಳು ಶನಿವಾರ ದಾಳಿ ನಡೆಸಿದ್ದು, ನಿರಾಶ್ರಿತರ ಶಿಬಿರಗಳಲ್ಲಿ ಆಹಾರ ನೆರವಿಗಾಗಿ ಕಾಯುತ್ತಿದ್ದ ಕನಿಷ್ಠ 25 ಮಂದಿ ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಆಸ್ಪತ್ರೆ ಮೂಲಗಳು ತಿಳಿಸಿವೆ.

ದಕ್ಷಿಣ ಗಾಜಾದಲ್ಲಿ ಮಹಿಳೆಯರು, ಮಕ್ಕಳು ಸೇರಿ 14 ಮಂದಿ, ಉತ್ತರ ಗಾಜಾದಲ್ಲಿ ಐದು ಮಂದಿ ಹಾಗೂ ಇತರೆ ಪ್ರದೇಶಗಳ ಮೇಲೆ ನಡೆದ ದಾಳಿಯಲ್ಲಿ ಆರು ಮಂದಿ ಸಾವಿಗೀಡಾಗಿದ್ದಾರೆ.

ಯುದ್ಧ ಮತ್ತು ಆಹಾರ ಪೂರೈಕೆಗೆ ಇಸ್ರೇಲ್ ಒಡ್ಡುತ್ತಿರುವ ಅಡ್ಡಿಯು ಗಾಜಾದಲ್ಲಿ ಹಸಿವಿನ ತೀವ್ರತೆ ಸೃಷ್ಟಿಸಲಿದೆ ಎಂದು ತಿಂಗಳ ಹಿಂದೆಯೇ ನೆರವು ಸಂಸ್ಥೆಗಳು ಘೋಷಿಸಿದ್ದವು. ಗಾಜಾದಲ್ಲಿ ಕ್ಷಾಮ ತಲೆದೋರಿದೆ ಎಂಬುದು ಸುಳ್ಳು ಎಂದಿರುವ ಇಸ್ರೇಲ್ ಸೇನೆಯು, ಗಾಜಾವನ್ನು ಶೀಘ್ರ ವಶಕ್ಕೆ ಪಡೆಯಲಾಗುವುದು ಎಂದು ಹೇಳಿದೆ.

ADVERTISEMENT

ಗಾಜಾದ ಸುತ್ತಮುತ್ತಲ ಪ್ರದೇಶಗಳಲ್ಲಿ ಇಸ್ರೇಲ್‌ ಪಡೆಗಳು ಯೋಧರ ನಿಯೋಜನೆಯನ್ನು ತೀವ್ರಗೊಳಿಸಿದ್ದು, ಮತ್ತೆ ಯುದ್ಧ ಶುರುವಾಗುವ ಆತಂಕ ಹೆಚ್ಚಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.