ADVERTISEMENT

ಇಸ್ರೇಲ್‌–ಪ್ಯಾಲೆಸ್ಟೀನ್‌ ಮಧ್ಯೆ ಕದನ ವಿರಾಮಕ್ಕೆ ಭಾರತ ಬೆಂಬಲ: ಎಸ್‌.ಜೈಶಂಕರ್

ಪಿಟಿಐ
Published 9 ಸೆಪ್ಟೆಂಬರ್ 2024, 15:35 IST
Last Updated 9 ಸೆಪ್ಟೆಂಬರ್ 2024, 15:35 IST
ಎಸ್‌.ಜೈಶಂಕರ್
ಎಸ್‌.ಜೈಶಂಕರ್   

ರಿಯಾದ್‌: ಗಾಜಾದಲ್ಲಿ ಇಸ್ರೇಲ್‌–ಪ್ಯಾಲೆಸ್ಟೀನ್‌ ಮಧ್ಯೆ ಆರಂಭವಾಗಿರುವ ಯುದ್ಧಕ್ಕೆ ಆದಷ್ಟು ಶೀಘ್ರ ಕದನವಿರಾಮ ಘೋಷಣೆಯಾಗಲಿ. ಅದಕ್ಕೆ ಭಾರತವು ಬೆಂಬಲ ನೀಡುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್ ಸೋಮವಾರ ಹೇಳಿದರು.

ರಿಯಾದ್‌ನಲ್ಲಿ ನಡೆದ ಭಾರತ–ಗಲ್ಫ್ ಸಹಕಾರ ಮಂಡಳಿಯ (ಜಿಸಿಸಿ) ವಿದೇಶಾಂಗ ವ್ಯವಹಾರಗಳ ಸಚಿವರ ಸಭೆಯಲ್ಲಿ ಜೈಶಂಕರ್ ಅವರು ಈ ಮಾತು ಹೇಳಿದರು.

‘ಇಸ್ರೇಲ್‌–ಪ್ಯಾಲೆಸ್ಟೀನ್‌ ಸಂಘರ್ಷದ ವಿಚಾರದಲ್ಲಿ ಭಾರತದ ನಿರ್ಧಾರವು ಸ್ಥಿರವಾಗಿದೆ. ಭಯೋತ್ಪಾದನೆ ಮತ್ತು ಒತ್ತೆಯಾಳುಗಳಾಗಿ ಹೊತ್ತೊಯ್ಯುವುದನ್ನು ಖಂಡಿಸುತ್ತೇವೆ. ಹಾಗೆಯೇ ಈ ಸಂಘರ್ಷದಲ್ಲಿ ಮುಗ್ಧ ನಾಗರಿಕರು ಮೃತಪಡುತ್ತಿರುವ ಬಗ್ಗೆ ತೀವ್ರ ಸಂಕಟವೂ ಆಗುತ್ತಿದೆ’ ಎಂದರು.

ADVERTISEMENT

ಉಭಯ ದೇಶಗಳು ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಬೇಕು ಎಂಬುದು ಭಾರತದ ಸಲಹೆ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.