ADVERTISEMENT

ಅಮೆರಿಕ ಚುನಾವಣೆ: ನ್ಯೂಜೆರ್ಸಿ, ನ್ಯೂಯಾರ್ಕ್: ಬೈಡನ್‌ಗೆ ಗೆಲುವು

ಪಿಟಿಐ
Published 4 ನವೆಂಬರ್ 2020, 9:04 IST
Last Updated 4 ನವೆಂಬರ್ 2020, 9:04 IST
ಜೋ ಬೈಡೆನ್‌
ಜೋ ಬೈಡೆನ್‌   

ನವದೆಹಲಿ: ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋ ಬೈಡೆನ್ ಅವರು ನ್ಯೂಜೆರ್ಸಿ ಮತ್ತು ನ್ಯೂಯಾರ್ಕ್‌ನಲ್ಲಿ ಜಯಗಳಿಸಿದ್ದರೆ, ಇವರ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಅವರು ಇತರೆ ಪ್ರಮುಖ ರಾಜ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಬೈಡೆನ್ ಅವರು 2.2 ಮಿಲಿಯನ್‌ ಮತ ಹಾಗೂ ಟ್ರಂಪ್ 1.2 ಮಿಲಿಯನ್‌ ಮತಗಳನ್ನು ಗಳಿಸಿದ್ದಾರೆ. ಜೋ ಬೈಡನ್ ಅವರು ಕೊಲೊರಾಡೊ, ಕನೆಕ್ಟಿಕಟ್, ಇಲಿನಾಯ್ಸ್‌,ಮಸಾಚುಸೆಟ್ಸ್, ನ್ಯೂ ಮೆಕ್ಸಿಕೊ, ವೆರ್ಮೊಂಟ್‌, ವರ್ಜಿನಿಯಾದಲ್ಲಿ ಮುನ್ನಡೆ ಸಾಧಿಸಿದ್ದಾರೆ.

‌ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಲಬಮಾ, ಅರ್ಕನಸ್, ಕೆಂಟುಕಿ, ಲೂಸಿಯಾನಾ, ಮಿಸ್ಸಿಸ್ಸಿಪ್ಪಿ, ನೆಬ್ರಾಸ್ಕಾ, ಒಕ್ಲಾಹಾಮಾ, ಟೆನ್ನೆಸಿ, ಪಶ್ಚಿಮ ವರ್ಜೀನಿಯಾ, ಇಂಡಿಯಾನಾ, ದಕ್ಷಿಣ ಕರೊಲಿನಾದಲ್ಲಿ ಗೆದಿದ್ದಾರೆ.

ADVERTISEMENT

ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿ ಇರುವಂತೆಯೇ ಜನರು 2020ರ ಅಧ್ಯಕ್ಷ ಸ್ಥಾನದ ಫಲಿತಾಂಶವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಕೊರೊನಾ ಸೋಂಕು ಪರಿಸ್ಥಿತಿಯ ನಡುವೆಯೂ ದಾಖಲೆ ಪ್ರಮಾಣದಲ್ಲಿ ಮತದಾನವಾಗಿದೆ.

ಸಾಮಾನ್ಯವಾಗಿ ಚುನಾವಣೆಯ ಸಂದರ್ಭದಲ್ಲಿ ಗಿಜಿಗಿಡುತ್ತಿದ್ದ ಟೈಮ್ಸ್ ಸ್ಕ್ವೇರ್‌ನಲ್ಲಿ ನೀರಸ ವಾತಾವರಣವಿತ್ತು. ಉಭಯ ಪಕ್ಷಗಳ ಬೆಂಬಲಿಗರು, ಮಾಧ್ಯಮ ಪ್ರತಿನಿಧಿಗಳು ಟೈಮ್ಸ್‌ ಸ್ಕ್ವೇರ್‌ನಲ್ಲಿ ಸೇರುತ್ತಿದ್ದರು. ಈ ಬಾರಿ ಅಂಥ ವಾತಾವರಣವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.