ADVERTISEMENT

ಕಮ್‌ಚಟ್ಕಾ ಕರಾವಳಿಯಲ್ಲಿ ಭೂಕಂಪ: ರಷ್ಯಾ, ಹವಾಯಿಯಲ್ಲಿ ಸುನಾಮಿ ಆತಂಕ

ರಾಯಿಟರ್ಸ್
Published 20 ಜುಲೈ 2025, 9:47 IST
Last Updated 20 ಜುಲೈ 2025, 9:47 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮಾಸ್ಕೊ: ರಷ್ಯಾದ ಪೂರ್ವದಲ್ಲಿರುವ ಕಮ್‌ಚಟ್ಕಾ ಪ್ರಾಂತ್ಯದ ಕರಾವಳಿ ಸಮೀಪ 7.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪ ಮೇಲ್ವಿಚಾರಣಾ ಸಂಸ್ಥೆಗಳು ತಿಳಿಸಿವೆ. ಇದರ ಬೆನ್ನಲ್ಲೇ, ರಷ್ಯಾ ಹಾಗೂ ಅಮೆರಿಕದ ಹವಾಯಿ ರಾಜ್ಯದಲ್ಲಿ ಸುನಾಮಿ ಆತಂಕ ಎದುರಾಗಿದೆ.

ಕಮ್‌ಚಟ್ಕಾ ಕರಾವಳಿಯು ಪೂರ್ವಕ್ಕೆ ಸುಮಾರು 10 ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಜರ್ಮನ್‌ ರೀಸರ್ಚ್‌ ಸೆಂಟರ್‌ ಫಾರ್‌ ಜಿಯೋಸೈನ್ಸಸ್‌ (GFZ) ಮಾಹಿತಿ ನೀಡಿದೆ.

ADVERTISEMENT

ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ (EMSC) ಭೂಕಂಪದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 7.4 ರಷ್ಟಿದೆ ಎಂದು ಹೇಳಿದೆ. ಅದಕ್ಕೂ ಮೊದಲು 6.7 ತೀವ್ರತೆಯ ಭೂಕಂಪವಾಗಿದೆ ಎಂದಿದ್ದ GFZ ಕೂಡ ತನ್ನ ಮಾಹಿತಿಯನ್ನು ತಿದ್ದುಪಡಿಮಾಡಿದ್ದು, 7.4 ತೀವ್ರತೆಯ ಭೂಕಂಪವಾಗಿದೆ ಎಂದು ಸ್ಪಷ್ಟಪಡಿಸಿದೆ.

ರಷ್ಯಾದ ಸರ್ಕಾರಿ ಸುದ್ದಿ ಸಂಸ್ಥೆ TASS, ಭೂಕಂಪದಿಂದಾಗಿ ಭಾರಿ ಅಲೆಗಳು ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ತುರ್ತು ಸೇವೆಗಳು ತಿಳಿಸಿರುವುದಾಗಿ ವರದಿ ಮಾಡಿದೆ.

ಭೂಕಂಪದ ಪರಿಣಾಮವಾಗಿ ರಷ್ಯಾ ಮಾತ್ರವಲ್ಲದೆ, ಅಮೆರಿಕದ ದ್ವೀಪ ರಾಜ್ಯ ಹವಾಯಿಯಲ್ಲೂ ಸುನಾಮಿ ಎದುರಾಗುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.