ಮಾಸ್ಕೋ: ಉಕ್ರೇನ್ ಜತೆಗೆ ಮಾತುಕತೆ ನಡೆಸಲು ಸಿದ್ಧವಿರುವುದಾಗಿ ರಷ್ಯಾ ಭಾನುವಾರ ಹೇಳಿದೆ.
ರಷ್ಯಾ ಭಾನುವಾರ ಉಕ್ರೇನ್ ಪ್ರಮುಖ ನಗರ ಖಾರ್ಕಿವ್ ಪ್ರವೇಶಿಸಿದ್ದು, ಅಲ್ಲಿ ಗ್ಯಾಸ್ ಪೈಪ್ ಲೈನ್ ಸ್ಫೋಟಿಸಿದೆ. ಈ ಮಧ್ಯೆ ಮಾತುಕತೆಯ ಪ್ರಸ್ತಾಪ ಕೇಳಿ ಬಂದಿದೆ.
‘ರಷ್ಯಾದ ಜೊತೆಗೆ ಮಾತುಕತೆಗೆ ಉಕ್ರೇನ್ ಸಿದ್ಧವಾಗಿದೆ. ಆದರೆ, ನೆರೆಯ ಬಿಲಾರುಸ್‌ನಲ್ಲಿ ಅಲ್ಲ. ಉಕ್ರೇನ್ ಮೇಲೆ ಆಕ್ರಮಣ ನಡೆಸಲು ಬಿಲರೂಸ್ ಅನ್ನು ರಷ್ಯಾ ಬಳಸಿಕೊಂಡಿದೆ. ಹೀಗಾಗಿ ಅಲ್ಲಿ ಮಾತುಕತೆ ಬೇಡ’ ಎಂದು ಝೆಲೆನ್‌ಸ್ಕಿ ಹೇಳಿದರು.
‘ವಾರ್ಸಾ, ಬ್ರಾಟಿಸ್ಲಾವಾ, ಬುಡಾಪೆಸ್ಟ್, ಇಸ್ತಾಂಬುಲ್, ಬಾಕು ಸೇರಿದಂತೆ ಎಲ್ಲವನ್ನೂ ಪ್ರಸ್ತಾಪಿಸಿದ್ದೇವೆ‘ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.