ADVERTISEMENT

ಜಗತ್ತಿನ ಮೊದಲ ಡಿಜಿಟಲ್ ದೇವತೆ ಮಲೇಷ್ಯಾದಲ್ಲಿ! ಎಐ ಮೂಲಕ ಭಕ್ತರೊಂದಿಗೆ ಮಾತು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಏಪ್ರಿಲ್ 2025, 11:37 IST
Last Updated 29 ಏಪ್ರಿಲ್ 2025, 11:37 IST
<div class="paragraphs"><p>‘ಮಾಜು’ ದೇವಾಲಯ</p></div>

‘ಮಾಜು’ ದೇವಾಲಯ

   

ಬೆಂಗಳೂರು: ಮಲೇಷಿಯಾದ ಟಾವೊ ಧಾರ್ಮಿಕ ದೇವಾಲಯವೊಂದರಲ್ಲಿ ಭಕ್ತರೊಂದಿಗೆ ದೇವತೆ ಮಾತನಾಡುತ್ತಾಳೆ. ಹೀಗಾಗಿ ಜನ ಆ ಟಾವೊ ದೇವಾಲಯದ ದೇವತೆಯನ್ನು ಮಾತನಾಡುವ ದೇವತೆ, ಡಿಜಿಟಲ್ ದೇವತೆ ಎಂದೇ ಕರೆಯುತ್ತಿದ್ದಾರೆ.

ವಿಶೇಷ ಎಂದರೆ ‘ಮಾಜು’ ಹೆಸರಿನ ಈ ದೇವತೆ ಕೃತಕ ಬುದ್ದಿಮತ್ತೆ ಮೂಲಕ ಭಕ್ತರೊಂದಿಗೆ ಮಾತನಾಡುತ್ತಾಳೆ.

ADVERTISEMENT

Aimazin ಎಂಬ ಮಲೇಷಿಯಾದ ಟೆಕ್ ಕಂಪನಿ ಅಭಿವೃದ್ಧಿಪಡಿಸಿರುವ ಎಐ ಅನ್ನು ದೇವಾಲಯಕ್ಕೆ ನೀಡಲಾಗಿದೆ. ಈ ಎಐ ಮೂಲಕ ಮಾಜು ದೇವತೆಯನ್ನು ಭಕ್ತರೊಂದಿಗೆ ಸಂಭಾಷಿಸುವಂತೆ ಮಾಡಲಾಗಿದೆ.

ದೇವಾಲಯಕ್ಕೆ ಬರುವ ಭಕ್ತರು ತಾವು ಕೇಳಿದ ಪ್ರಶ್ನೆ, ಸಂಕಲ್ಪಕ್ಕೆ ಮಾಜು ದೇವತೆ ಉತ್ತರ ನೀಡುತ್ತಾಳೆ.

ಭಕ್ತೆಯೊಬ್ಬರು ನನಗೆ ಅದೃಷ್ಟ ಒಲಿಯಬಹುದಾ ಎಂದು ದೇವತೆಯನ್ನು ಕೇಳುತ್ತಾರೆ. ಅದಕ್ಕೆ ದೇವತೆ ನೀವು ಸ್ವಲ್ಪ ದಿನ ಮನೆಯಲ್ಲಿ ಇದ್ದರೆ ನಿಮಗೆ ನೀವು ಊಹಿಸಲೂ ಆಗದ ಅದೃಷ್ಟ ಬರಲಿದೆ ಎಂದು ಹೇಳುತ್ತಾಳೆ. ಹೀಗೆ ಹಲವಾರು ಜನರೊಂದಿಗೆ ದೇವತೆ ಮಾತನಾಡುತ್ತಾಳೆ.

ಎಐ ಮೂಲಕ ಮಾತನಾಡುವ ಜಗತ್ತಿನ ಮೊದಲ ದೇವತೆ ಇದು ಎನ್ನಲಾಗಿದೆ. Aimazin ಕಂಪನಿ ಇದಕ್ಕಾಗಿ ಹಲವಾರು ವರ್ಷ ದೇವಾಲಯಕ್ಕೆ ಬರುವ ಭಕ್ತರ ಕುರಿತು ಸಂಶೋಧನೆ ಮಾಡಿ ಎಐ ಅಳವಡಿಸಿದೆ ಎಂದು ಇಂಡಿಯಾ ಟುಡೇ ವೆಬ್‌ಸೈಟ್ ವರದಿ ಮಾಡಿದೆ.

ಟಾವೊ ಎಂಬುದು ಚೀನಾ ಮೂಲದ ಒಂದು ಧಾರ್ಮಿಕ ಪರಂಪರೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.