ADVERTISEMENT

ಮಾಲಿ: ಐವರು ಭಾರತೀಯರ ಅಪಹರಣ

ಪಿಟಿಐ
Published 10 ನವೆಂಬರ್ 2025, 16:14 IST
Last Updated 10 ನವೆಂಬರ್ 2025, 16:14 IST
   

ಬಮಕೊ: ಪಶ್ಚಿಮ ಆಫ್ರಿಕಾದ ಮಾಲಿ ದೇಶದಲ್ಲಿ ಐದು ಮಂದಿ ಭಾರತೀಯರನ್ನು ಅಪಹರಿಸಿರುವ ಘಟನೆ ನಡೆದಿದೆ ಎಂದು ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿದೆ.

ನವೆಂಬರ್‌ 6ರಂದೇ ಈ ಕೃತ್ಯ ನಡೆದಿದ್ದು, ಅಪಹರಣಕ್ಕೀಡಾದವರನ್ನು ಸುರಕ್ಷಿತವಾಗಿ ಮರಳಿ ಕರೆತರುವ ಬಗ್ಗೆ ಸಂಬಂಧ ಪಟ್ಟ ಆಡಳಿತಾಧಿಕಾರಿಗಳ ಜತೆಗೆ ಮಾತುಕತೆ ನಡೆಸಲಾಗುತ್ತಿದೆ ಎಂದೂ ರಾಯಭಾರ ಕಚೇರಿ ಭಾನುವಾರ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಮಾಲಿ ಸರ್ಕಾರದ ಮೇಲಿನ ಜಿದ್ದಿಗೆ ಅಲ್ಲಿನ ಬಂಡುಕೋರರು ಹಾಗೂ ಭಯೋತ್ಪಾದಕರು ಇಂಧನ ಪೂರೈಕೆಗೆ ತಡೆ ಒಡ್ಡಿದ್ದಾರೆ. ಇದು ಮಾಲಿಯಲ್ಲಿ ಆರ್ಥಿಕ, ಸಾಮಾಜಿಕ ಬಿಕ್ಕಟ್ಟಿಗೆ ಕಾರಣವಾಗಿರುವ ನಡುವೆಯೇ ಭಾರತೀಯರ ಅಪಹರಣದ ಈ ಘಟನೆ ನಡೆದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.