ADVERTISEMENT

ಲೆಬನಾನ್ ಮೇಲೆ ಇಸ್ರೇಲ್‌ ದಾಳಿ: ಇಬ್ಬರು ಯೋಧರು ಸೇರಿ ಆರು ಮಂದಿ ಸ್ಥಳದಲ್ಲೇ ಸಾವು

ರಾಯಿಟರ್ಸ್
Published 27 ನವೆಂಬರ್ 2024, 8:56 IST
Last Updated 27 ನವೆಂಬರ್ 2024, 8:56 IST
<div class="paragraphs"><p>ಇಸ್ರೇಲ್‌ ಪಡೆಗಳು</p></div>

ಇಸ್ರೇಲ್‌ ಪಡೆಗಳು

   

–ರಾಯಿಟರ್ಸ್ ಚಿತ್ರ

ನವದೆಹಲಿ: ಹಿಜ್ಬುಲ್ಲಾ-ಇಸ್ರೇಲ್ ನಡುವಿನ ಕದನ ವಿರಾಮ ಜಾರಿಗೆ ಬರುವ ಕೆಲವೇ ಗಂಟೆಗಳ ಮೊದಲು ಲೆಬನಾನ್‌ ಗಡಿಯಲ್ಲಿ ಇಸ್ರೇಲ್‌ ಪಡೆಗಳು ದಾಳಿ ನಡೆಸಿದ್ದು, ಆರು ಮಂದಿ ಮೃತಪಟ್ಟಿದ್ದಾರೆ ಎಂದು ಸಿರಿಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.

ADVERTISEMENT

ಸಿರಿಯಾ ಮತ್ತು ಲೆಬನಾನ್ ನಡುವಿನ ಗಡಿಯನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ಪಡೆಗಳು ವೈಮಾನಿಕ ದಾಳಿ ನಡೆಸಿವೆ ಎಂದು ಸಿರಿಯಾದ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.

ದಾಳಿಯಲ್ಲಿ ಇಬ್ಬರು ಯೋಧರು ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಕ್ಕಳು, ಮಹಿಳೆಯರು ಸೇರಿದಂತೆ 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಇಸ್ರೇಲ್‌ ಮತ್ತು ಹಿಜ್ಬುಲ್ಲಾ ನಡುವಣ ಸಂಘರ್ಷವು ಕಳೆದ ವರ್ಷ ಆರಂಭವಾಗಿದ್ದು ಲೆಬನಾನ್‌ನಲ್ಲಿ ಕನಿಷ್ಠ 2,900 ಮಂದಿ ಮೃತಪಟ್ಟಿದ್ದಾರೆ. 13,150 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯದ ವರದಿ ಹೇಳಿದೆ.

ಹಮಾಸ್‌ ವಿರುದ್ಧ ಗಾಜಾದಲ್ಲಿ ಇಸ್ರೇಲ್‌ ನಡೆಸುತ್ತಿರುವ ಯುದ್ಧದಲ್ಲಿ ಈವರೆಗೆ 43 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ನಾಗರಿಕರ ಮೇಲೆಯೂ ದಾಳಿ ನಡೆಯುತ್ತಿದೆ. ಮಹಿಳೆಯರು ಮತ್ತು ಮಕ್ಕಳೇ ಮೃತರಲ್ಲಿ ಅರ್ಧಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.