ADVERTISEMENT

ಸಲಿಂಗ ವಿವಾಹಕ್ಕೆ ಸ್ಟೇಟ್‌ ಆಫ್‌ ಮೆಕ್ಸಿಕೊ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 12:43 IST
Last Updated 12 ಅಕ್ಟೋಬರ್ 2022, 12:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೆಕ್ಸಿಕೊ ಸಿಟಿ: ಮೆಕ್ಸಿಕೊದ ಅತಿ ದೊಡ್ಡ ರಾಜ್ಯವಾದ ‘ದಿ ಸ್ಟೇಟ್‌ ಆಫ್‌ ಮೆಕ್ಸಿಕೊ’ ಸಲಿಂಗ ವಿವಾಹಕ್ಕೆ ಮಂಗಳವಾರ ಒಪ್ಪಿಗೆ ನೀಡಿತು.

ಸಲಿಂಗ ವಿವಾಹ ಅಂಗೀಕಾರದ ಪರವಾಗಿರಾಜ್ಯದ ಶಾಸಕರು ಮತ ನೀಡಿದರು. ಈ ಮೂಲಕ, ಮೆಕ್ಸಿಕೊದ 32 ರಾಜ್ಯಗಳ ಪೈಕಿ 29 ರಾಜ್ಯಗಳುಸಲಿಂಗ ವಿವಾಹವನ್ನು ಅಂಗೀಕರಿಸಿದಂತಾಗಿದೆ.

‘ಸಲಿಂಗ ವಿವಾಹಕ್ಕೆ ಒಪ್ಪಿಗೆ ನೀಡಿರುವ 29ನೇ ರಾಜ್ಯವಾಗುವ ಮೂಲಕ ನಾವು ಅಸಮಾನತೆಯನ್ನು ಕಡಿಮೆ ಮಾಡುವತ್ತ ಹೆಜ್ಜೆ ಇಟ್ಟಿದ್ದೇವೆ. ದಿ ಸ್ಟೇಟ್‌ ಆಫ್‌ ಮೆಕ್ಸಿಕೊ ಯಾರಿಗೂ ಹಿಂದೆ ಉಳಿಯಲು ಬಿಡುವುದಿಲ್ಲ ಎಂಬ ಸಂದೇಶವನ್ನು ದೇಶಕ್ಕೆ ರವಾನಿಸಿದ್ದೇವೆ’ ಎಂದು ಶಾಸಕ ಪವೊಲಾ ಜಿಮೇನೆಜ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.