

ವಿಮಾನ
ಕ್ವಾಲಾಲಂಪುರ: 11 ವರ್ಷಗಳ ಹಿಂದೆ ಹಿಂದೂ ಮಹಾಸಾಗರದ ದಕ್ಷಿಣ ಪ್ರದೇಶದಲ್ಲಿ ಪತನಗೊಂಡಿರುವ ಮಲೇಷ್ಯಾ ವಿಮಾನದ (ಎಂಎಚ್ 370) ಅವಶೇಷಗಳನ್ನು ಪತ್ತೆಹಚ್ಚುವುದಕ್ಕಾಗಿ ಕೈಗೊಂಡಿರುವ ಆಳ ಸಮುದ್ರ ಶೋಧ ಕಾರ್ಯಾಚರಣೆಯನ್ನು ಡಿಸೆಂಬರ್ 30ರಿಂದ ಪುನಾರಂಭಿಸಿರುವುದಾಗಿ ಮಲೇಷ್ಯಾ ಸಾರಿಗೆ ಸಚಿವಾಲಯ ಬುಧವಾರ ತಿಳಿಸಿದೆ.
2014ರ ಮಾರ್ಚ್ 8ರಂದು 239 ಪ್ರಯಾಣಿಕರನ್ನು ಹೊತ್ತು ಕ್ವಾಲಾಲಂಪುರದಿಂದ ಬೀಜಿಂಗ್‌ಗೆ ಹೊರಟಿದ್ದ ಬೋಯಿಂಗ್ 777 ವಿಮಾನವು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಸಂಪರ್ಕ ಕಳೆದುಕೊಂಡಿತ್ತು.
ವಿಮಾನವು ಹಿಂದೂ ಮಹಾಸಾಗರದ ದಕ್ಷಿಣದ ಕಡೆಗೆ ಸಾಗಿರುವುದು ಉಪಗ್ರಹ ಸೆರೆ ಹಿಡಿದ ದತ್ತಾಂಶಗಳಿಂದ ತಿಳಿದುಬಂದಿದ್ದು, ಅದೇ ಪ್ರದೇಶದಲ್ಲಿ ಪತನಗೊಂಡಿದೆ ಎಂದು ನಂಬಲಾಗಿದೆ. ಆಳ ಸಮುದ್ರದ ಕಾರ್ಯಾಚರಣೆ ನಡೆಸಿ, ಅವಶೇಷಗಳನ್ನು ಪತ್ತೆಹಚ್ಚಲು ಸರ್ಕಾರ ನಿರ್ಧರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.