ಸಾಂದರ್ಭಿಕ ಚಿತ್ರ
ಎ.ಐ ಚಿತ್ರ
ದುಬೈ: ಅಮೆರಿಕ ಹಾಗೂ ಇಸ್ರೇಲ್ ಸೇರಿ ಇರಾನ್ ಮೇಲೆ ನಡೆಸಿದ ದಾಳಿಯ ಬೆನ್ನಲ್ಲೇ ಎಚ್ಚರಿಕೆಯಿಂದಿರಿ ಎಂದು ನಾಗರಿಕರಿಗೆ ಯುಇಎ ತಿಳಿಸಿದೆ.
ನಾಗರಿಕರಿಗೆ ಯುಎಇ ರವಾನಿಸಿರುವ ಎಚ್ಚರಿಕೆ ಸಂದೇಶ
ನಾಗರಿಕರಿಗೆ ಈ ಬಗ್ಗೆ ಮೊಬೈಲ್ ಸಂದೇಶ ರವಾನಿಸಿರುವ ಯುಎಇ ಗೃಹ ವ್ಯವಹಾರಗಳ ಸಚಿವಾಲಯ, ಸಮೀಪ ಇರುವ ಸುರಕ್ಷಿತ ಕಟ್ಟಡಗಳಲ್ಲಿ ಆಶ್ರಯ ಪಡೆಯಿರಿ ಎಂದು ಸೂಚಿಸಿದೆ.
‘ಸದ್ಯದ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಸಂಭವನೀಯ ಕ್ಷಿಪಣಿ ದಾಳಿಯ ಭೀತಿಯಿದೆ. ದಯವಿಟ್ಟು ತಕ್ಷಣವೇ ಕಿಟಕಿಗಳು, ಬಾಗಿಲುಗಳು ಮತ್ತು ತೆರೆದ ಪ್ರದೇಶಗಳಿಂದ ದೂರವಿರಿ. ಸಮೀಪದ ಸುರಕ್ಷಿತ ಕಟ್ಟಡದಲ್ಲಿ ಆಶ್ರಯ ಪಡೆಯಿರಿ. ಮುಂದಿನ ಅಧಿಕೃತ ಸೂಚನೆಗಳಿಗಾಗಿ ಕಾಯಿರಿ’ ಎಂದು ಸಂದೇಶ ಕಳುಹಿಸಿದೆ.
(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆಯಲಾದ ಸುದ್ದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.