ADVERTISEMENT

ರಷ್ಯಾದಿಂದ ಕ್ಷಿಪಣಿ, ಡ್ರೋನ್‌ ದಾಳಿ: ವಿದ್ಯುತ್‌, ನೀರು ಸಂಪರ್ಕ ಅಸ್ತವ್ಯಸ್ತ

ಏಜೆನ್ಸೀಸ್
Published 18 ಅಕ್ಟೋಬರ್ 2022, 15:37 IST
Last Updated 18 ಅಕ್ಟೋಬರ್ 2022, 15:37 IST
ಕೀವ್‌ ಮೇಲಿನ ರಷ್ಯಾ ದಾಳಿಯ ವೇಳೆ ಮೃ‍ತಪಟ್ಟ ವ್ಯಕ್ತಿಯ ಶವಪೆಟ್ಟಿ ಕಂಡು ತಾಯಿಯ ರೋದನ  –ಎಎಫ್‌ಪಿ ಚಿತ್ರ
ಕೀವ್‌ ಮೇಲಿನ ರಷ್ಯಾ ದಾಳಿಯ ವೇಳೆ ಮೃ‍ತಪಟ್ಟ ವ್ಯಕ್ತಿಯ ಶವಪೆಟ್ಟಿ ಕಂಡು ತಾಯಿಯ ರೋದನ  –ಎಎಫ್‌ಪಿ ಚಿತ್ರ   

ಕೀವ್‌: ಉಕ್ರೇನ್‌ ರಾಜಧಾನಿ ಕೀವ್‌ ಮತ್ತು ಸುತ್ತಲಿನ ನಗರಗಳ ಮೇಲೆ ರಷ್ಯಾದ ಕ್ಷಿಪಣಿಗಳು ಮತ್ತು ಆತ್ಮಾಹುತಿ ಡ್ರೋನ್‌ಗಳ ದಾಳಿ ಮಂಗಳವಾರ ಕೂಡ ನಡೆದಿದ್ದು, ಪ್ರಮುಖ ಮೂಲಸೌಕರ್ಯಗಳು ಧ್ವಂಸಗೊಂಡಿವೆ.

ಪ್ರಮುಖ ನಗರಗಳನ್ನು ಗುರಿಯಾಗಿಸಿ ರಷ್ಯಾ ಪಡೆಗಳು ನಡೆಸಿರುವವೈಮಾನಿಕ ಬಾಂಬ್ ದಾಳಿ, ಕ್ಷಿಪಣಿ ಹಾಗೂ ಆತ್ಮಾಹುತಿ ಡ್ರೋನ್‌ ದಾಳಿಯಿಂದಾಗಿ ಕೀವ್‌, ಝೈಟೊಮಿರ್‌, ಝಪೊರಿಝಿಯಾ, ಮೈಕೊಲೈವ್‌, ಹಾರ್ಕಿವ್‌ ಪ್ರದೇಶಗಳಲ್ಲಿ ವಿದ್ಯುತ್ ಮತ್ತು ನೀರಿನ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ಜನವಸತಿ ಕಟ್ಟಡಗಳು ಧ್ವಂಸಗೊಂಡಿವೆ.

‘ದೇಶದ ಜನತೆಯನ್ನು ಶೀತ ಮತ್ತು ಕತ್ತಲೆಗೆ ದೂಡಲು, ಶಾಂತಿಮಾತುಕತೆ ಅಸಾಧ್ಯಗೊಳಿಸಲು ರಷ್ಯಾ ನಡೆಸುತ್ತಿರುವ ತೀವ್ರ ದಾಳಿ ಖಂಡನೀಯ’ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಕಳೆದ ಒಂದು ವಾರದಲ್ಲಿ ನಡೆದಿರುವ ದಾಳಿಯಿಂದ ಉಕ್ರೇನಿನ ಮೂರನೇ ಒಂದರಷ್ಟು ವಿದ್ಯುತ್‌ ಸ್ಥಾವರಗಳು ನಾಶವಾಗಿವೆ. ದೇಶದಲ್ಲಿ ಕಗ್ಗತ್ತಲು ಕವಿದಿದೆ. ಪುಟಿನ್‌ ಆಡಳಿತದೊಂದಿಗೆ ಶಾಂತಿಮಾತುಕತೆ ಸಾಧ್ಯವೇ ಇಲ್ಲ ಎಂದು ಝೆಲೆನ್‌ಸ್ಕಿ ಟ್ವೀಟ್‌ನಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.