ADVERTISEMENT

ಮಿಲಿಟರಿ, ಇಂಧನ ಕ್ಷೇತ್ರದಲ್ಲಿ ಬಲವರ್ಧನೆ: ಭಾರತಕ್ಕೆ ಅಮೆರಿಕದ F-35 ಯುದ್ಧ ವಿಮಾನ

ಪಿಟಿಐ
Published 14 ಫೆಬ್ರುವರಿ 2025, 2:30 IST
Last Updated 14 ಫೆಬ್ರುವರಿ 2025, 2:30 IST
<div class="paragraphs"><p>ಡೊನಾಲ್ಡ್ ಟ್ರಂಪ್, ನರೇಂದ್ರ ಮೋದಿ</p></div>

ಡೊನಾಲ್ಡ್ ಟ್ರಂಪ್, ನರೇಂದ್ರ ಮೋದಿ

   

(ರಾಯಿಟರ್ಸ್ ಚಿತ್ರ)

ವಾಷಿಂಗ್ಟನ್: ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯ ವೇಳೆ ರಕ್ಷಣಾ ಹಾಗೂ ಇಂಧನ ಕ್ಷೇತ್ರದ ಬಲವೃದ್ಧಿಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ.

ADVERTISEMENT

ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, 'ಅಮೆರಿಕದ ಅತ್ಯಾಧುನಿಕ ಎಫ್-35 ಯುದ್ಧ ವಿಮಾನಗಳನ್ನು ಭಾರತಕ್ಕೆ ಒದಗಿಸಲಾಗುವುದು' ಎಂದು ಘೋಷಿಸಿದ್ದಾರೆ.

ಇದರೊಂದಿಗೆ ರಕ್ಷಣಾ ಕ್ಷೇತ್ರಕ್ಕೆ ಭಾರಿ ಉತ್ತೇಜನ ಲಭಿಸಲಿದೆ. ಮಿಲಿಟರಿ ಸಹಕಾರ ಹೆಚ್ಚಿಸುವುದರ ಭಾಗವಾಗಿ ಅಮೆರಿಕ ಅತ್ಯಾಧುನಿಕ ಫೈಟರ್ ಜೆಟ್‌ಗಳನ್ನು ಭಾರತಕ್ಕೆ ಪೂರೈಸಲಿದೆ.

'ವಿಶ್ವದ ಅತ್ಯಂತ ಹಳೆಯ' ಮತ್ತು 'ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ' ದೇಶಗಳ ನಡುವೆ 'ವಿಶೇಷ ಬಾಂಧವ್ಯ' ಇವೆ. ರಕ್ಷಣಾ, ಇಂಧನ, ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವುದರತ್ತ ಉಭಯ ರಾಷ್ಟ್ರಗಳು ಬದ್ಧವಾಗಿವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

'ಈ ವರ್ಷದಿಂದ ಭಾರತಕ್ಕೆ ನಾವು ಮಿಲಿಟರಿ ಮಾರಾಟವನ್ನು ಹಲವು ಶತಕೋಟಿ ಡಾಲರ್‌ಗಳಷ್ಟು ಹೆಚ್ಚಿಸಲಿದ್ದೇವೆ. ಭಾರತಕ್ಕೆ ಎಫ್‌–35 ಯುದ್ಧ ವಿಮಾನ ಒದಗಿಸಲು ಹಾದಿ ಮುಕ್ತಗೊಳಿಸಿದ್ದೇವೆ' ಎಂದು ಅವರು ತಿಳಿಸಿದ್ದಾರೆ.

ಇಂಧನ ವಲಯದಲ್ಲೂ ಭಾರತದ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಟ್ರಂಪ್ ತಿಳಿಸಿದರು. ಆ ಮೂಲಕ 'ಅಮೆರಿಕ ಭಾರತಕ್ಕೆ ತೈಲ ಮತ್ತು ಅನಿಲ ಪೂರೈಕೆ ಮಾಡುವ ಮುಂಚೂಣಿ ದೇಶವೆನಿಸಲಿದೆ' ಎಂದು ಅವರು ಉಲ್ಲೇಖಿಸಿದರು.

ಅತ್ಯಂತ ಮಹತ್ವಾಕಾಂಕ್ಷೆಯ 'ಭಾರತ-ಮಧ್ಯಪ್ರಾಚ್ಯ-ಯುರೋಪ್' ಆರ್ಥಿಕ ಕಾರಿಡಾರ್ ಕುರಿತು ಪ್ರಸ್ತಾಪಿಸಿದ ಟ್ರಂಪ್, 'ಉಭಯ ದೇಶಗಳು ಐತಿಹಾಸಿಕ 'ಶ್ರೇಷ್ಠವಾದ ವ್ಯಾಪಾರ ಮಾರ್ಗ' ನಿರ್ಮಿಸಲು ಬದ್ಧರಾಗಿದ್ದೇವೆ' ಎಂದು ಹೇಳಿದ್ದಾರೆ.

'ಅಮೆರಿಕದ ಪರಮಾಣು ತಂತ್ರಜ್ಞಾನಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲು ಭಾರತವು ತನ್ನ ಕಾನೂನುಗಳನ್ನು ಸುಧಾರಿಸುತ್ತಿದೆ' ಎಂದೂ ಟ್ರಂಪ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.