ADVERTISEMENT

ನೇಪಾಳ ವಿಮಾನ ದುರಂತ: ಕಾಣೆಯಾಗಿರುವ ಕೊನೆ ವ್ಯಕ್ತಿಗಾಗಿ ಶೋಧ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 13:38 IST
Last Updated 18 ಜನವರಿ 2023, 13:38 IST
ನೇಪಾಳದ ಪೊಖಾರಾದಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟವರ ಅಂತಿಮ ಸಂಸ್ಕಾರವನ್ನು ಸಂಬಂಧಿಗಳು ನೆರವೇರಿಸಿದರು  –ಎಪಿ ಚಿತ್ರ
ನೇಪಾಳದ ಪೊಖಾರಾದಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟವರ ಅಂತಿಮ ಸಂಸ್ಕಾರವನ್ನು ಸಂಬಂಧಿಗಳು ನೆರವೇರಿಸಿದರು  –ಎಪಿ ಚಿತ್ರ   

ಕಠ್ಮಂಡು: ನೇಪಾಳದ ಪೊಖರಾದಲ್ಲಿ ಸಂಭವಿಸಿದ್ದ ವಿಮಾನ ದುರಂತದಲ್ಲಿ ಕಾಣೆಯಾಗಿರುವ ಕಡೇ ವ್ಯಕ್ತಿಗಾಗಿ ಶೋಧಕಾರ್ಯಾಚರಣೆಯನ್ನು ಬುಧವಾರ ಪುನರಾರಂಭಿಸಲಾಯಿತು.

ಮಂಗಳವಾರ ಮತ್ತೊಂದು ದೇಹವನ್ನು ದುರಂತ ಸಂಭವಿಸಿದ ಸೇಟಿ ನದಿಯ ಕೊರಕಲಿನಿಂದ ಹೊರತೆಗೆಯಲಾಗಿದೆ. ಈ ಮೂಲಕ ವಿಮಾನದಲ್ಲಿದ್ದ 72 ಜನರಲ್ಲಿ 71 ಜನರ ಮೃತದೇಹ ಪತ್ತೆಯಾದಂತಾಗಿದೆ.

ಕಾಣೆಯಾಗಿರುವ ಮತ್ತೊಬ್ಬ ವ್ಯಕ್ತಿಗಾಗಿ ಶೋಧಕಾರ್ಯವನ್ನು ಈಜುಗಾರರು ಮತ್ತು ನಾಲ್ಕು ಡ್ರೋನ್‌ಗಳ ಸಹಾಯದಿಂದ ಬುಧವಾರ ಬೆಳಿಗ್ಗೆ ಆರಂಭಿಸಲಾಯಿತು. ಕಾಣೆಯಾಗಿರುವ ವ್ಯಕ್ತಿಯನ್ನು ಹುಡುಕುವ ಭರವಸೆಯನ್ನು ರಕ್ಷಣಾ ತಂಡದವರು ನೀಡಿದ್ದಾರೆ ಎಂದು ಅಲ್ಲಿಯ ಸುದ್ದಿ ಪತ್ರಿಕೆ ‘ಮೈರಿಪಬ್ಲಿಕ್‌’ ವರದಿ ಮಾಡಿದೆ.

ADVERTISEMENT

ಸುಮಾರು 48 ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಾಠ್ಮಂಡುಗೆ ನೇಪಾಳ ಸೇನಾ ಹೆಲಿಕಾಪ್ಟರ್‌ಗಳ ಮೂಲಕ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೇಪಾಳದ ಯೇತಿ ಏರ್‌ಲೈನ್ಸ್‌ಗೆ ಸೇರಿದ್ದ ವಿಮಾನವು ಭಾನುವಾರ ಪೊಖರದಲ್ಲಿ ನಿಲುಗಡೆಯಾಗುವ ಕೆಲವೇ ಸೆಕೆಂಡುಗಳ ಮುನ್ನ ನೆಲಕ್ಕೆ ಅಪ್ಪಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.