ADVERTISEMENT

ಬಾಂಗ್ಲಾಕ್ಕೆ ವಿದ್ಯುತ್‌ ರಫ್ತು ಆರಂಭಿಸಿದ ನೇಪಾಳ

ಪಿಟಿಐ
Published 15 ಜೂನ್ 2025, 14:32 IST
Last Updated 15 ಜೂನ್ 2025, 14:32 IST
   

ಕಠ್ಮಂಡು: ನೇಪಾಳವು ಭಾರತೀಯ ವಿದ್ಯುತ್‌ ಪ್ರಸರಣ ಮಾರ್ಗದ ಮೂಲಕ ಬಾಂಗ್ಲಾದೇಶಕ್ಕೆ 40 ಮೆಗಾವಾಟ್‌ ವಿದ್ಯುತ್‌ ಅನ್ನು ರಫ್ತು ಮಾಡಲು ಪ್ರಾರಂಭಿಸಿದೆ.

ನೇಪಾಳದಲ್ಲಿ ಉತ್ಪಾದಿಸುವ ವಿದ್ಯುತ್‌ ಅನ್ನು ಭಾರತೀಯ ಪ್ರಸರಣ ಮಾರ್ಗದ ಮೂಲಕ ಬಾಂಗ್ಲಾದೇಶಕ್ಕೆ ರಫ್ತು ಮಾಡುವ ತ್ರಿಪಕ್ಷೀಯ ಒಪ್ಪಂದಕ್ಕೆ ನೇಪಾಳ, ಭಾರತ ಮತ್ತು ಬಾಂಗ್ಲಾದೇಶ 2024ರ ಅ.3ರಂದು ಸಹಿ ಹಾಕಿದ್ದವು. 

ಬಾಂಗ್ಲಾದೇಶಕ್ಕೆ ವಿದ್ಯುತ್‌ ರಫ್ತು ಮಾಡಲು ಶನಿವಾರ ಮಧ್ಯರಾತ್ರಿಯಿಂದ ಪ್ರಾರಂಭಿಸಲಾಗಿದೆ ಎಂದು ನೇಪಾಳದ ಅಧಿಕಾರಿಯೊಬ್ಬರು ತಿಳಿಸಿದರು. 

ADVERTISEMENT

ಒಪ್ಪಂದದ ಪ್ರಕಾರ, ಭಾರತದ 400– ಕೆವಿ ಮುಜಾಫ್ಫರ್‌ಪುರ– ಬಹರಂಪುರ– ಭೇರಮರ ವಿದ್ಯುತ್‌ ಪ್ರಸರಣ ಮಾರ್ಗದ ಮೂಲಕ ಜೂನ್‌ 15ರಿಂದ ನವೆಂಬರ್ 15ರ ಒಳಗಾಗಿ ನೇಪಾಳವು ಬಾಂಗ್ಲಾದೇಶಕ್ಕೆ 40 ಮೆಗಾವಾಟ್‌ ವಿದ್ಯುತ್‌ ರಫ್ತು ಮಾಡಬೇಕು.

ಮುಂದಿನ ಐದು ವರ್ಷಗಳ ಅವಧಿಗೆ ನೇಪಾಳದಿಂದ ವಿದ್ಯುತ್‌ ಆಮದಿಗೆ ಬಾಂಗ್ಲಾದೇಶ ಒಪ್ಪಿಗೆ ನೀಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.