ADVERTISEMENT

‘ದಿ ಕಾಶ್ಮೀರ ಫೈಲ್ಸ್’: ನ್ಯೂಜಿಲೆಂಡ್‌ನಲ್ಲಿ ಸೆನ್ಸಾರ್‌ ಮಂಡಳಿಯಿಂದ ಪರಿಶೀಲನೆ

ಪಿಟಿಐ
Published 20 ಮಾರ್ಚ್ 2022, 11:34 IST
Last Updated 20 ಮಾರ್ಚ್ 2022, 11:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 'ದಿ ಕಾಶ್ಮೀರ ಫೈಲ್ಸ್'ಸಿನಿಮಾಕ್ಕೆ ಆರ್16 ಪ್ರಮಾಣಪತ್ರ ನೀಡುವ ಬಗ್ಗೆ ನ್ಯೂಜಿಲೆಂಡ್‌ ಸೆನ್ಸಾರ್ ಮಂಡಳಿ ಮುಖ್ಯಸ್ಥ ಡೇವಿಡ್ ಶಾಂಕ್ಸ್ ಅವರು ಪರಿಶೀಲನೆ ನಡೆಸುತ್ತಿದ್ದಾರೆ. ಈ ಪ್ರಕಾರ ಹಿರಿಯರು ಇಲ್ಲದೆ 16 ವರ್ಷಕ್ಕಿಂತ ಕೆಳಗಿನ ಮಕ್ಕಳು ಈ ಸಿನಿಮಾ ನೋಡುವಂತಿಲ್ಲ.

ಮಾರ್ಚ್ 24ರಂದು ಬೆಳ್ಳಿ ತೆರೆಗೆ ಬರಲು ಸಿದ್ಧವಾಗಿರುವ ಈ ಸಿನಿಮಾ ಹಿಂದೂ-ಮುಸ್ಲಿಂ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂದು ಮುಸ್ಲಿಂ ಮುಖಂಡರು ಆತಂಕ ವ್ಯಕ್ತಪಡಿಸಿದ್ದರಿಂದ ಇಂಥ ಕ್ರಮ ಕೈಗೊಳ್ಳಲಾಗಿದೆ. ಆದರೆ ಈ ಕ್ರಮವನ್ನು ಸಿನಿಮಾ ನಿಷೇಧದ ಕ್ರಮವೆಂದು ಭಾವಿಸಬಾರದು ಎಂದು ಡೇವಿಡ್‌ ಹೇಳಿದ್ದಾರೆ.

ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ನ್ಯೂಜಿಲೆಂಡ್ ಮಾಜಿ ಉಪ ಪ್ರಧಾನಿ ವಿನ್‌ಸ್ಟನ್ ಪೀಟರ್ಸ್ ಅವರು, ಸಿನಿಮಾಕ್ಕೆ ಕತ್ತರಿ ಹಾಕುವುದು ಎಂದರೆ ನ್ಯೂಜಿಲೆಂಡ್ ಜನತೆಯ ಸ್ವಾತಂತ್ರ್ಯದ ಹಕ್ಕುಗಳ ಮೇಲಿನ ದಾಳಿ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.