ADVERTISEMENT

ಸತತ 100 ತಾಸು ಅಡುಗೆ ಮಾಡಿ ದಾಖಲೆ ಸೃಷ್ಟಿಸಿದ ನೈಜೀರಿಯಾ ಮಹಿಳೆ

ಎಪಿ
Published 16 ಮೇ 2023, 14:36 IST
Last Updated 16 ಮೇ 2023, 14:36 IST
.
.   

ಅಬುಜಾ: ನೈಜೀರಿಯಾದ ಮಹಿಳೆಯೊಬ್ಬರು ಸತತ 100 ತಾಸು ಅಡುಗೆ ಮಾಡಿ ಹೊಸ ಜಾಗತಿಕ ದಾಖಲೆ ಸೃಷ್ಟಿಸಿದ್ದಾರೆ.

ಹಿಲ್ದಾ ಬಸಿ ಅವರು ಕಳೆದ ಗುರುವಾರದಿಂದ ಅಡುಗೆ ಮಾಡಲು ಆರಂಭಿಸಿದ್ದರು. ಅಡುಗೆ ಮಾಡುವಾಗ ಪ್ರತಿ ಒಂದು ಗಂಟೆ ಕಳೆದ ನಂತರ ಐದು ನಿಮಿಷ ಮತ್ತು ಪ್ರತಿ 12 ಗಂಟೆಗಳ ನಂತರ ಒಂದು ತಾಸು ವಿಶ್ರಾಂತಿ ಪಡೆಯುತ್ತಿದ್ದರು.

ಇದಕ್ಕೂ ಮುನ್ನ ಭಾರತೀಯ ಪ್ರಜೆ ಲತಾ ಟಂಡನ್‌ ಅವರು ಸತತ 87 ಗಂಟೆ 45 ನಿಮಿಷ ಅಡುಗೆ ಮಾಡಿ 2019ರಲ್ಲಿ ಗಿನ್ನೆಸ್‌ ದಾಖಲೆ ಸೃಷ್ಟಿಸಿದ್ದರು.

ADVERTISEMENT

‘ನೈಜೀರಿಯಾ ಮಹಿಳೆಯೊಬ್ಬರು ಅಡುಗೆ ಮಾಡಿ ದಾಖಲೆ ಸೃಷ್ಟಿಸಿರುವುದು ಗಮನಕ್ಕೆ ಬಂದಿದೆ. ಇದನ್ನು ಗಿನ್ನೆಸ್‌ ದಾಖಲೆಗೆ ಸೇರ್ಪಡೆ ಮಾಡುವ ಮುನ್ನ ಎಲ್ಲಾ ಸಾಕ್ಷ್ಯಗಳನ್ನು ಪರಿಶೀಲಿಸಬೇಕಿದೆ’ ಎಂದು ಗಿನ್ನೆಸ್‌ ವಿಶ್ವ ದಾಖಲೆ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.