ADVERTISEMENT

ಎಲ್ಲೆಡೆ ತೀವ್ರವಾಗಿ ಕಾಡಲಿದೆಯಾ ಓಮೈಕ್ರಾನ್? ಸಿಂಗಪುರ ವೈದ್ಯನ ಸ್ಫೋಟಕ ಹೇಳಿಕೆ

ಐಎಎನ್ಎಸ್
Published 4 ಡಿಸೆಂಬರ್ 2021, 13:09 IST
Last Updated 4 ಡಿಸೆಂಬರ್ 2021, 13:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಿಂಗಪುರ: ಜಗತ್ತಿನಾದ್ಯಂತ ತೀವ್ರ ಆತಂಕ ಹುಟ್ಟುಹಾಕಿರುವ ಕೊರೊನಾವೈರಸ್‌ನ ರೂಪಾಂತರಿ ತಳಿ ಓಮೈಕ್ರಾನ್ ಬಗ್ಗೆ ಸಾಕಷ್ಟು ಊಹಾಪೋಹಗಳು ತೇಲಾಡುತ್ತಿವೆ.

ಓಮೈಕ್ರಾನ್ ಅತ್ಯಂತ ಅಪಾಯಕಾರಿ ಹೌದೋ? ಅಲ್ಲವೋ? ಎಂಬುದು ಇನ್ನೂ ದೃಢಪಟ್ಟಿಲ್ಲವಾದರೂ ಈ ತಳಿ ಅತಿ ವೇಗದ ಪ್ರಸರಣ ಶಕ್ತಿಯನ್ನು ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಎಚ್‌ಓ) ಈಗಾಗಲೇ ಖಚಿತಪಡಿಸಿದೆ.

ಇದರ ಬೆನ್ನಲ್ಲೇ ಓಮೈಕ್ರಾನ್ ಬಗ್ಗೆ ಚಿಂತೆಗೀಡು ಮಾಡುವಂತ ವರದಿಯೊಂದು ಬಂದಿದ್ದು, ‘ಮುಂಬರುವ ಕೆಲವೇ ತಿಂಗಳುಗಳಲ್ಲಿ ಓಮೈಕ್ರಾನ್ ಇಡೀ ಜಗತ್ತನ್ನು ತೀವ್ರ ಬಾದಿಸಲಿದೆ’ ಎಂದು ಸಿಂಗಪುರದ ವೈರಾಣು ತಜ್ಞರೊಬ್ಬರು ಭವಿಷ್ಯ ನುಡಿದಿರುವುದಾಗಿ ಐಎಎನ್‌ಎಸ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ADVERTISEMENT

ಸಿಂಗಪುರದ ಮೌಂಟ್ ಎಲಿಜಬೆತ್‌ ನೋವೆನಾ ಆಸ್ಪತ್ರೆಯ ವೈರಾಣು ತಜ್ಞ ಡಾ. ಲಿಆಂಗ್ ಹೊ ನಾಮ್ ಅವರು, ‘ಮುಂಬರುವ ಐದಾರು ತಿಂಗಳುಗಳಲ್ಲಿ ಓಮೈಕ್ರಾನ್ ತಳಿ ಇಡೀ ಜಗತ್ತನ್ನೇ ತೀವ್ರವಾಗಿ ಬಾದಿಸಲಿದೆ’ ಎಂದು ಸ್ಫೋಟಕಹೇಳಿಕೆ ನೀಡಿದ್ದಾರೆ.

ಓಮೈಕ್ರಾನ್‌ಗೂ ಲಸಿಕೆ ಸಿದ್ದವಾಗಲಿದೆ ಎಂಬ ಮಾಡೆರ್ನಾ ಹಾಗೂ ಫೈಜರ್ ಲಸಿಕಾ ಕಂಪನಿಗಳ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಲಿಆಂಗ್ ಅವರು, ‘ಈ ಐಡಿಯಾ ಏನೋ ಚೆನ್ನಾಗಿದೆ, ಆದರೆ, ಅಷ್ಟರಲ್ಲಿ ಓಮೈಕ್ರಾನ್ ತನ್ನ ವಿರಾಟ್ ರೂಪವನ್ನು ಇಡೀ ಜಗತ್ತಿಗೆ ತೋರಿಸಲಿದೆ’ ಎಂಬ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.

‘ಅತ್ಯಂತ ತ್ವರಿತ ಪ್ರಸರಣ ಶಕ್ತಿ ಹೊಂದಿರುವ ಓಮೈಕ್ರಾನ್‌ನಿಂದ ಬಹುತೇಕರು ಸೋಂಕಿಗೆ ತುತ್ತಾಗಲಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಸದ್ಯಕ್ಕೆ ಇದಕ್ಕೆ ಪರಿಹಾರ ಇಲ್ಲ. ಆದರೆ, ಕಡ್ಡಾಯ ಲಸಿಕೆ ತೆಗೆದುಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಕಡ್ಡಾಯ ಬಳಕೆ, ಸ್ಯಾನಿಟೈಸ್‌ ಮಾಡುವುದರಿಂದ ಪಾರಾಗಬಹುದು’ ಎಂದುಲಿಆಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.