ADVERTISEMENT

‘ಕಾಶ್ಮೀರ ಅಭಿವೃದ್ಧಿಗೊಳ್ಳಲು ಶುರುವಾದರೆ,70 ವರ್ಷಗಳ ಪಾಕ್‌ ಯೋಜನೆ ನೆಲಕಚ್ಚಲಿದೆ’

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 2:07 IST
Last Updated 2 ಅಕ್ಟೋಬರ್ 2019, 2:07 IST
   

ವಾಷಿಂಗ್ಟನ್:‘ಜಮ್ಮು ಮತ್ತು ಕಾಶ್ಮೀರದಲ್ಲಿ ಒಮ್ಮೆ ಅಭಿವೃದ್ಧಿಯ ಪರ್ವ ಶುರುವಾದರೆ, ಪಾಕಿಸ್ತಾನದ 70 ವರ್ಷಗಳ ಯೋಜನೆ ನೆಲಕಚ್ಚಲಿದೆ’ ಎಂದುವಿದೇಶಾಂಗ ಸಚಿವ ಜೈಶಂಕರ್ ಅವರು ಹೇಳಿದರು.

ಅಮೆರಿಕದ ಪ್ರಮುಖ ಚಿಂತಕರ ಚಾವಡಿಯಾದ ‘ಕಾರ್ಯತಂತ್ರ ಮತ್ತು ಅಂತರರಾಷ್ಟ್ರೀಯ ಅಧ್ಯಯನಗಳ ಕೇಂದ್ರ’ದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾಮಾಜಿಕ ಮಾಧ್ಯಮ ಮತ್ತು ಇಂಟರ್‌ನೆಟ್‌ ಅನ್ನು ದುರ್ಬಳಕೆ ಮಾಡಿಕೊಂಡು ಭಾರತ ವಿರೋಧಿ ಪಡೆ ಸಜ್ಜುಗೊಳಿಸುವುದನ್ನು ತಡೆಯುವುದಕ್ಕಾಗಿ ಹಾಗೂ ಅಭಿವೃದ್ಧಿ ಹಂತಕ್ಕೆ ಪರಿವರ್ತನೆಯಾಗುತ್ತಿರುವ ಈ ಸಮಯದಲ್ಲಿ ಯಾವುದೇ ಸಾವು ನೋವು ಆಗದಿರಲಿ ಎನ್ನುವ ಉದ್ದೇಶಕ್ಕೆಕಾಶ್ಮೀರದಲ್ಲಿ ಮೊಬೈಲ್‌ ಮತ್ತು ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸಿದ್ದೇವೆ’ ಎಂದು ಸಮರ್ಥಿಸಿಕೊಂಡರು.

‘ಜಮ್ಮು ಮತ್ತು ಕಾಶ್ಮೀರವನ್ನು ಅಭಿವೃದ್ಧಿಯ ಪಥದಲ್ಲಿ ನಾವು ತೆಗೆದುಕೊಂಡು ಹೋದರೆ, ಬಹಳ ಕೆಟ್ಟು ಪರಿಸ್ಥಿಯನ್ನು ಎದುರಿಸುತ್ತಿರುವ ಪಾಕ್‌ ಆಕ್ರಮಿತ ಕಾಶ್ಮೀರದ ಜನ ಸ್ವ ಇಚ್ಛೆಯಿಂದ ಭಾರತದ ಕಡೆ ಬರುತ್ತಾರೆ’ ಎಂದು ‘ಪಿಒಕೆ ಜನರು ಗಡಿ ನಿಯಂತ್ರಣ ರೇಖೆಯಾದ್ಯಂತ ಪ್ರತಿಭಟನೆ ನಡೆಸಲು ನನ್ನ ಅನುಮತಿಗಾಗಿ ಕಾಯುತ್ತಿದ್ದಾರೆ’ ಎಂಬ ಇಮ್ರಾನ್‌ ಖಾನ್‌ ಹೇಳಿಕೆಗೆ ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.