ADVERTISEMENT

ಇರಾನ್‌ನಿಂದ ಲಂಕನ್ನರ ರಕ್ಷಣೆ: ಭಾರತಕ್ಕೆ ಧನ್ಯವಾದ ಸಲ್ಲಿಸಿದ ಶ್ರೀಲಂಕಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜೂನ್ 2025, 2:35 IST
Last Updated 22 ಜೂನ್ 2025, 2:35 IST
<div class="paragraphs"><p>ಟೆಹರಾನ್‌ನಲ್ಲಿ ಸಂಭವಿಸಿದ ಸ್ಫೋಟದ ದೃಶ್ಯ</p></div>

ಟೆಹರಾನ್‌ನಲ್ಲಿ ಸಂಭವಿಸಿದ ಸ್ಫೋಟದ ದೃಶ್ಯ

   

(ರಾಯಿಟರ್ಸ್ ಚಿತ್ರ)

ಕೊಲಂಬೊ: 'ಆಪರೇಷನ್ ಸಿಂಧೂ' ಮೂಲಕ ಶ್ರೀಲಂಕಾದ ನಾಗರಿಕರನ್ನೂ ಭಾರತ ರಕ್ಷಣೆ ಮಾಡುತ್ತಿದೆ. ಭಾರತದ ನೆರವಿಗೆ ಶ್ರೀಲಂಕಾದ ಸರ್ಕಾರ ಧನ್ಯವಾದ ಸಲ್ಲಿಸಿದೆ.

ADVERTISEMENT

ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಶ್ರೀಲಂಕಾದ ವಿದೇಶಾಂಗ ಇಲಾಖೆಯ ಸಚಿವ ವಿಜಿತಾ ಹೇರಾತ್ ಮತ್ತು ಅಲ್ಲಿನ ವಿದೇಶಾಂಗ ಇಲಾಖೆಯು ಪೋಸ್ಟ್ ಮಾಡಿದೆ.

'ಇರಾನ್‌ನಿಂದ ಭಾರತೀಯ ಪ್ರಜೆಗಳೊಂದಿಗೆ ಶ್ರೀಲಂಕಾದದ ನಾಗರಿಕನ್ನು ಸ್ಥಳಾಂತರ ಮಾಡುವಲ್ಲಿ ಸಕಾಲಿಕವಾಗಿ ಬೆಂಬಲ ನೀಡಿದ ಭಾರತ ಸರ್ಕಾರಕ್ಕೆ ಹೃತ್ಪೂರ್ವಕವಾಗಿ ಧನ್ಯವಾದ ತಿಳಿಸುತ್ತೇನೆ. ಈ ಸಮಯೋಚಿತ ಕಾರ್ಯವು ಶ್ರೀಲಂಕಾ ಹಾಗೂ ಭಾರತ ನಡುವಣ ಗಾಢವಾದ ಸಂಬಂಧ ಮತ್ತು ಶಾಶ್ವತ ಪಾಲುದಾರಿಕೆಯನ್ನು ಪ್ರತಿಬಿಂಬಿಸುತ್ತದೆ' ಎಂದು ಅವರು ಉಲ್ಲೇಖಿಸಿದ್ದಾರೆ.

'ಭಾರತ ಸರ್ಕಾರದ ಸಹಾಯಕ್ಕಾಗಿ ಶ್ರೀಲಂಕಾದ ಜನರು ಪ್ರಾಮಾಣಿಕವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತಾರೆ' ಎಂದು ಶ್ರೀಲಂಕಾದ ವಿದೇಶಾಂಗ ಇಲಾಖೆಯು ತಿಳಿಸಿದೆ.

'ಈ ಒಗ್ಗಟ್ಟಿನ ಕಾರ್ಯವು ಭಾರತ ಹಾಗೂ ಶ್ರೀಲಂಕಾ ನಡುವಣ ಗಾಢ ಸಂಬಂಧ ಹಾಗೂ ಶಾಶ್ವತ ಪಾಲುದಾರಿಕೆಗೆ ಸಾಕ್ಷ್ಯವಾಗಿದೆ. ಲಂಕಾದ ಜನರಿಂದಲೂ ಪ್ರಶಂಸೆಗೆ ಕಾರಣವಾಗಿದೆ' ಎಂದು ಹೇಳಿದೆ.

ಭಾರತೀಯರು ಮಾತ್ರವಲ್ಲದೆ 'ಆಪರೇಷನ್ ಸಿಂಧೂ' ಮೂಲಕ ನೇಪಾಳ ಮತ್ತು ಶ್ರೀಲಂಕಾದ ನಾಗರಿಕರನ್ನೂ ಭಾರತ ಸ್ಥಳಾಂತರ ಮಾಡುತ್ತಿದೆ. ಈಗಾಗಲೇ ಎರಡೂ ದೇಶಗಳ ವಿದೇಶಾಂಗ ಇಲಾಖೆಗಳು ತಮ್ಮ ನಾಗರಿಕರಿಗೆ ಈ ಮಾಹಿತಿ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.