ADVERTISEMENT

ಮಲೇರಿಯಾ ಲಸಿಕೆ ಬಳಕೆಗೆ ಆಫ್ರಿಕಾ ಅನುಮತಿ

ಪಿಟಿಐ
Published 13 ಏಪ್ರಿಲ್ 2023, 14:16 IST
Last Updated 13 ಏಪ್ರಿಲ್ 2023, 14:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್‌: ‘ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ, ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಉತ್ಪಾದಿಸಿದ ಗರಿಷ್ಠ ದಕ್ಷತೆಯ ಮಲೇರಿಯಾ ಲಸಿಕೆಯನ್ನು ಘಾನಾದಲ್ಲಿ ಬಳಸಲು ಆಫ್ರಿಕಾದ ಆಹಾರ ಮತ್ತು ಔಷಧ ಪ್ರಾಧಿಕಾರವು ಅನುಮತಿ ನೀಡಿದೆ’ ಎಂದು ವಿಶ್ವವಿದ್ಯಾಲಯ ಗುರುವಾರ ಹೇಳಿದೆ.

‘ಮಲೇರಿಯಾದಿಂದಾಗಿ ಮೃತಪಡುವ ಹೆಚ್ಚಿನ ಅಪಾಯವಿರುವ 5ರಿಂದ 36 ತಿಂಗಳ ವಯೋಮಾನದ ಮಕ್ಕಳಿಗೆ ನೀಡುವ ಆರ್‌21/ಮ್ಯಾಟ್ರಿಕ್ಸ್‌–ಎಂ ಲಸಿಕೆಯ ಬಳಕೆಗೆ ಆಫ್ರಿಕಾ ಅನುಮತಿ ನೀಡಿದೆ’ ಎಂದು ವಿಶ್ವವಿದ್ಯಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT