ADVERTISEMENT

ಸೋದರನ ಮಗನೊಂದಿಗೆ ಮಗಳ ವಿವಾಹ ಮಾಡಿಸಿದ ಪಾಕ್ ಸೇನಾ ಮುಖ್ಯಸ್ಥ ಮುನೀರ್

ಏಜೆನ್ಸೀಸ್
Published 31 ಡಿಸೆಂಬರ್ 2025, 11:09 IST
Last Updated 31 ಡಿಸೆಂಬರ್ 2025, 11:09 IST
<div class="paragraphs"><p>ಪಾಕಿಸ್ತಾನಿ ಸೇನಾ ಮುಖ್ಯಸ್ಥ ಮುನೀರ್</p></div>

ಪಾಕಿಸ್ತಾನಿ ಸೇನಾ ಮುಖ್ಯಸ್ಥ ಮುನೀರ್

   

ಇಸ್ಲಾಮಾಬಾದ್: ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ತಮ್ಮ ಪುತ್ರಿ ಮಹ್ನೂರ್ ಅವರನ್ನು ಸೋದರನ ಪುತ್ರನಿಗೆ ನೀಡಿ ವಿವಾಹ ಮಾಡಿದ್ದಾರೆ.

ಸೋದರ ಕಾಸಿಮ್ ಮುನೀರ್ ಪುತ್ರ ಅಬ್ದುಲ್ ರೆಹಮಾನ್‌ ಜತೆ ಪುತ್ರಿ ಮಹ್ನೂರ್‌ ವಿವಾಹ ಮಾಡಿಸಿದ್ದಾರೆ. ಈ ಮೂಲಕ ಸೋದರನ ಮಗನನ್ನು ಮುನೀರ್ ಅಳಿಯನನ್ನಾಗಿ ಮಾಡಿಕೊಂಡಿದ್ದಾರೆ.

ADVERTISEMENT

ವಿವಾಹವು ರಾವಲ್ಪಿಂಡಿಯ ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿಯಲ್ಲಿ ಡಿ.26ರಂದು ಅದ್ಧೂರಿಯಾಗಿ ನೆರವೇರಿದೆ. ಹೀಗಿದ್ದೂ ವಿವಾಹ ಸಮಾರಂಭದ ಯಾವುದೇ ಫೋಟೊಗಳು ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ.

ಮುನೀರ್ ಅವರು ನಾಲ್ಕು ಹೆಣ್ಣುಮಕ್ಕಳ ತಂದೆಯಾಗಿದ್ದು, ಈಗ ಮೂರನೇ ಮಗಳ ಮದುವೆ ನೆರವೇರಿದೆ.

ವಿವಾಹದಲ್ಲಿ ದೇಶದ ಪ್ರಮುಖ ರಾಜಕೀಯ ನಾಯಕರಾದ ಪ್ರಧಾನಿ ಶೆಹಬಾಜ್ ಷರೀಫ್, ಅಧ್ಯಕ್ಷ ಆಸಫಿ ಅಲಿ ಜರ್ದಾರಿ, ಉಪಪ್ರಧಾನಿ ಇಶಾಕ್ ದಾರ್, ಐಎಸ್‌ಐ ಮುಖ್ಯಸ್ಥ ಮತ್ತು ನಿವೃತ್ತ ಜನರಲ್‌ಗಳು ಭಾಗಿಯಾಗಿದ್ದರು.

ಅಬ್ದುಲ್ ರೆಹಮಾನ್ ಕೂಡ ಪಾಕಿಸ್ತಾನ ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದರು. ನಂತರ ಸೇನಾ ಅಧಿಕಾರಿಗಳಿಗೆ ಮೀಸಲಾದ ಕೋಟಾದ ಮೂಲಕ ನಾಗರಿಕ ಸೇವೆಗಳಿಗೆ ಸೇರಿದ್ದು, ಪ್ರಸ್ತುತ ಸಹಾಯಕ ಆಯುಕ್ತರಾಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ ಎಂದು ಎನ್‌ಡಿಟಿವಿ ವರದಿ ತಿಳಿಸಿದೆ.

'ಮದುವೆಯಲ್ಲಿ 400 ಅತಿಥಿಗಳು ಭಾಗಿಯಾಗಿದ್ದರು ಆದರೆ ಭದ್ರತಾ ಕಾರಣಗಳಿಂದ ಸಮಾರಂಭದಲ್ಲಿ ಕುರಿತಾದ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ' ಎಂದು ಪಾಕಿಸ್ತಾನದ ಪತ್ರಕರ್ತ ಜಾಹಿದ್‌ ಗಿಸ್ಕೋರಿ ಹೇಳಿರುವುದಾಗಿ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.