
ಪ್ರಜಾವಾಣಿ ವಾರ್ತೆ
ಇಸ್ಲಾಮಾಬಾದ್/ಲಾಹೋರ್ (ಪಿಟಿಐ): ತನ್ನ ವಾಯು ಪ್ರದೇಶದಲ್ಲಿ ಭಾರತೀಯ ವಿಮಾನಯಾನ ಸಂಸ್ಥೆಗಳ ವಿಮಾನಗಳ ಹಾರಾಟದ ನಿರ್ಬಂಧವನ್ನು ಪಾಕಿಸ್ತಾನವು ಜನವರಿ 23ರವರೆಗೆ ವಿಸ್ತರಿಸಿದೆ.
ಪಾಕಿಸ್ತಾನದಲ್ಲಿ ಭಾರತೀಯ ವಿಮಾನಗಳ ಹಾರಾಟಕ್ಕೆ ಡಿಸೆಂಬರ್ 24ರವರೆಗೆ ನಿರ್ಬಂಧ ಹೇರಲಾಗಿತ್ತು. ಇದೀಗ ಪಾಕಿಸ್ತಾನ ವಿಮಾನಯಾನ ಪ್ರಾಧಿಕಾರವು (ಪಿಎಎ) ಬುಧವಾರ ಮತ್ತೊಂದು ತಿಂಗಳು ನಿರ್ಬಂಧವನ್ನು ವಿಸ್ತರಿಸಿದೆ.
ಪಹಲ್ಗಾಮ್ ದಾಳಿಯ ಬಳಿಕ ಎರಡೂ ದೇಶಗಳು ತಮ್ಮ ವಾಯು ಪ್ರದೇಶದಲ್ಲಿ ವಿಮಾನ ಹಾರಾಟಕ್ಕೆ ನಿರ್ಬಂಧ ಹೇರಿಕೊಂಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.