ADVERTISEMENT

ಇಂದು ವಿಶ್ವಾಸಮತ ಯಾಚಿಸಲಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್

ಏಜೆನ್ಸೀಸ್
Published 6 ಮಾರ್ಚ್ 2021, 5:43 IST
Last Updated 6 ಮಾರ್ಚ್ 2021, 5:43 IST
ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌
ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌   

ಇಸ್ಲಾಮಾಬಾದ್:‌ ತಮ್ಮ ಆಪ್ತ ಹಾಗೂ ಹಣಕಾಸು ಸಚಿವ ಅಬ್ದುಲ್‌ ಹಫೀಜ್‌ ಶೇಖ್‌ ಅವರು ಸಂಸತ್‌ ಚುನಾವಣೆಯಲ್ಲಿ ಸೋಲು ಕಂಡಿರುವ ಹಿನ್ನಲೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಇಂದು ಸಂಸತ್ತಿನಲ್ಲಿ ವಿಶ್ವಾಸ ಮತಯಾಚಿಸಲಿದ್ದಾರೆ.

ಶೇಖ್‌ ಅವರು ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್‌ ಡೆಮಾಕ್ರಟಿಕ್‌ ಮೂವ್‌ಮೆಂಟ್‌ (ಪಿಡಿಎಂ) ಅಭ್ಯರ್ಥಿ ಯುಸೂಫ್‌ ರಾಜಾ ಗಿಲಾನಿ ಎದುರು ಸೋಲು ಕಂಡಿದ್ದರು.

ಗಿಲಾನಿ ಗೆಲುವು ಕಾಣುತ್ತಿದ್ದಂತೆ ಇಮ್ರಾನ್‌ ಖಾನ್ ಅವರನ್ನುವಿರೋಧ ಪಕ್ಷದ ಮುಖಂಡರು ಟೀಕಿಸಿದ್ದರು. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂತೆ ಒತ್ತಾಯಿಸಿದ್ದರು. ಫಲಿತಾಂಶ ಘೋಷಣೆಯಾದ ಕೆಲವೇ ಗಂಟೆಗಳ ಬಳಿಕ ಮಾತನಾಡಿದ್ದ ವಿದೇಶಾಂಗ ಸಚಿವ ಶಾಹ್‌ ಮಹಮೂದ್‌ ಖುರೇಶಿ, ವಿಶ್ವಾಸ ಮತ ಯಾಚಿಸಲು ಪ್ರಧಾನಿ ನಿರ್ಧಾರಿಸಿದ್ದಾರೆ ಎಂದು ಪ್ರಕಟಿಸಿದ್ದರು. ಖರೇಶಿ ಆಡಳಿತಾರೂಢ ಪಕ್ಷದ ಉಪಾಧ್ಯಕ್ಷರೂ‌ ಹೌದು.

ADVERTISEMENT

ಇಮ್ರಾನ್‌ ಅವರು ಸಂಸತ್‌ನಲ್ಲಿ ವಿಶ್ವಾಸಮತ ಯಾಚಿಸಲಿರುವ ಪಾಕಿಸ್ತಾನದ ಮೊದಲ ಪ್ರಧಾನಿಯೇನಲ್ಲ. ಸಂವಿಧಾನದ 8ನೇ ತಿದ್ದುಪಡಿಗೆ ಅನುಸಾರವಾಗಿ 1985 ರಿಂದ2008 ರ ವರೆಗೆ ಬೆನಜಿರ್‌ ಭುಟ್ಟೊ, ನವಾಜ್‌ ಷರೀಫ್‌, ಜಫರುಲ್ಲಾ ಜಮಾಲಿ, ಚೌಧರಿ ಶುಜಾತ್‌, ಶೌಕತ್‌ ಅಜಿಜ್‌ ಮತ್ತು ಯುಸೂಫ್‌ ರಾಜಾ ಗಿಲಾನಿ ಸೇರಿದಂತೆ ಎಲ್ಲ ಪ್ರಧಾನಿಗಳೂ ವಿಶ್ವಾಸಮತ ಯಾಚಿಸಿದ್ದಾರೆ.

ಆದರೆ ಸ್ವಯಂಪ್ರೇರಿತರಾಗಿ ವಿಶ್ವಾಸಮತ ಯಾಚಿಸುತ್ತಿರುವ ಎರಡನೇ ಪ್ರಧಾನಿ ಇವರಾಗಿದ್ದಾರೆ.ನವಾಜ್‌ ಷರೀಫ್‌ ಅವರು1993ರಲ್ಲಿ ಸ್ವಯಂಪ್ರೇರಿತರಾಗಿ ವಿಶ್ವಾಸಮತ ಯಾಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.