
ಪಿಟಿಐ
ಪೆಶಾವರ: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಭದ್ರತಾ ಪಡೆಯು 11 ಉಗ್ರರನ್ನು ಹತ್ಯೆ ಮಾಡಿದೆ.
ಗುಪ್ತಚರ ಆಧಾರಿಸಿ ಕಾರ್ಯಾಚರಣೆಗಳು ಮತ್ತು ಪೊಲೀಸರ ಜಂಟಿ ತಂಡವು ಗುರುವಾರ ಪ್ರತ್ಯೇಕ ಸ್ಥಳಗಳಲ್ಲಿ ದಾಳಿ ನಡೆಸಿ, ಪಿತ್ನಾ ಅಲ್ ಖ್ವಾರಿಜ್‌ಗೆ ಸೇರಿದ 11 ಉಗ್ರರನ್ನು ಹತ್ಯೆ ಮಾಡಿದೆ ಎಂದು ಪಾಕಿಸ್ತಾನ ಸೇನಾ ಮಾಧ್ಯಮ ವಿಭಾಗ ಶನಿವಾರ ತಿಳಿಸಿದೆ.
ತೆಹ್ರೀಕ್ –ಇ–ತಾಲಿಬಾನ್ ಪಾಕಿಸ್ತಾನ್‌ಗೆ (ಟಿಟಿಪಿ) ಸೇರಿದ ಉಗ್ರರನ್ನು ಪಿತ್ನಾ ಅಲ್ ಖ್ವಾರಿಜ್ ಎಂದು ಕರೆಯಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.