ADVERTISEMENT

ಪಾಕಿಸ್ತಾನ | ಅರೆಸೇನಾ ಪಡೆಯ ಕಚೇರಿ ಮೇಲೆ ಆತ್ಮಾಹುತಿ ದಾಳಿ ಯತ್ನ: 5 ಉಗ್ರರ ಹತ್ಯೆ

ಪಿಟಿಐ
Published 3 ಸೆಪ್ಟೆಂಬರ್ 2025, 3:05 IST
Last Updated 3 ಸೆಪ್ಟೆಂಬರ್ 2025, 3:05 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಎ.ಐ ಚಿತ್ರ

ಪೇಶಾವರ: ಖೈಬರ್ ಪಖ್ತುಂಖ್ವಾ ‍ಪ್ರಾಂತ್ಯದಲ್ಲಿರುವ ಅರೆಸೇನಾ ಪಡೆಯ ಪ್ರಧಾನ ಕಚೇರಿ ಮೇಲೆ ಮಂಗಳವಾರ ಉಗ್ರರ ದಾಳಿ ಯತ್ನವನ್ನು ಭದ್ರತಾ ಪಡೆಗಳು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದು, ಈ ವೇಳೆ ಆರು ಸೈನಿಕರು ಮೃತಪಟ್ಟಿದ್ದು, ಐವರು ಉಗ್ರರು ಕೊಲ್ಲಲ್ಪಟ್ಟಿದ್ದಾರೆ ಎಂದು ಸೇನೆ ಮಾಹಿತಿ ನೀಡಿದೆ.

ADVERTISEMENT

ಬನ್ನೂ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ನಿಷೇಧಿತ ತೆಹ್ರಿಕ್–ಎ–ತಾಲಿಬಾನ್‌ ಸಂಘಟನೆ ಈ ದಾಳಿ ಯತ್ನ ನಡೆಸಿದೆ. ಫೆಡರಲ್ ಕಾನ್‌ಸ್ಟಬುಲರಿಯ (ಎಫ್‌ಸಿ) ಪ್ರಧಾನ ಕಚೇರಿಯ ಆವರಣ ಗೋಡೆಗೆ ಸ್ಫೋಟಕ ತುಂಬಿದ ವಾಹನ ಡಿಕ್ಕಿ ಹೊಡೆಯಲು ಪ್ರಯತ್ನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಆತ್ಮಾಹುತಿ ದಾಳಿಯಿಂದಾಗಿ ಆವರಣ ಗೋಡೆಯ ಪಾರ್ಶ್ವ ಕುಸಿದಿದ್ದು, ಪಕ್ಕದಲ್ಲಿರುವ ನಾಗರಿಕರ ಆಸ್ತಿಗಳಿಗೆ ಹಾನಿಯಾಗಿದೆ. ಮೂವರು ನಾಗರಿಕರಿಗೆ ಗಾಯಗಳಾಗಿವೆ. ಉಗ್ರರ ದಾಳಿ ಯತ್ನಕ್ಕೆ ತ್ವರಿತವಾಗಿ ತಿರುಗೇಟು ನೀಡಲಾಗಿದ್ದು, ಅವರ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಉಗ್ರರನ್ನು ಗುರಿಯಾಗಿಸಿಕೊಂಡು ಕರಾರುವಕ್ಕಾದ ದಾಳಿ ನಡೆಸಿದ್ದು, ಐವರನ್ನು ಕೊಲ್ಲಲಾಗಿದೆ. ಗುಂಡಿನ ದಾಳಿಯಲ್ಲಿ 6 ಯೋಧರು ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಎಫ್‌ಸಿ ಹಾಗೂ ಪಾಕಿಸ್ತಾನ ಸೇನಾ ಸಿಬ್ಬಂದಿಯೂ ಇದ್ದಾರೆ ಎಂದು ಮಾಹಿತಿ ನೀಡಿದೆ.

ಇತ್ತೀಚಿನ ದಿನಗಳಲ್ಲಿ ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ ಭಯೋತ್ಪಾದಕ ದಾಳಿಯ ಸಂಖ್ಯೆ ಹೆಚ್ಚಾಗಿದ್ದು, ಅದರಲ್ಲಿಯೂ ಬನ್ನೂ, ಪೇಶಾವರ, ಕಾರಕ್, ಲಕ್ಕಿ ಮರ್ವತ್‌ ಹಾಗೂ ಬಜೌರ್ ಪ್ರದೇಶಗಳಲ್ಲಿ ಕಾನೂನು ಜಾರಿ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಹೆಚ್ಚಿನ ದಾಳಿಗಳು ನಡೆದಿವೆ.

ಉಗ್ರರ ದಾಳಿ ಯತ್ನಕ್ಕೆ ಪೊಲೀಸರು, ಸೇನೆ ಹಾಗೂ ಎಫ್‌ಸಿ ಸಿಬ್ಬಂದಿ ತ್ವರಿತವಾಗಿ ತಿರುಗೇಟು ನೀಡಿದ್ದು, ಒಂದು ಗಂಟೆಯಲ್ಲೇ ಐವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಜನರಲ್ ಝುಲ್ಪಿಕರ್ ಹಮೀದ್ ಮಾಧ್ಯಮಗಳೊಂದಿಗೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.