ADVERTISEMENT

ಕೊರೊನಾ ವೈರಸ್‌ ತಡೆಯಲು ಫ್ರಾನ್ಸ್‌ ದೇಶದಾದ್ಯಂತ ಕರ್ಫ್ಯೂ ವಿಸ್ತರಣೆ

ಮೂರನೇ ಲಾಕ್‌ಡೌನ್ ತಪ್ಪಿಸಲು ಕರ್ಫ್ಯೂ ಬಳಕೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 6:53 IST
Last Updated 15 ಜನವರಿ 2021, 6:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಪ್ಯಾರಿಸ್: ಕೊರೊನಾವರೈಸ್ ಸೋಂಕು ಹರಡುವುದನ್ನು ನಿಯಂತ್ರಿಸುವುದಕ್ಕಾಗಿ ಶನಿವಾರ ಸಂಜೆ 6 ಗಂಟೆಯಿಂದ 15 ದಿನಗಳ ಕಾಲ ಫ್ರಾನ್ಸ್‌ ದೇಶದಾದ್ಯಂತ ಕರ್ಫ್ಯೂ ವಿಸ್ತರಿಸಿರುವುದಾಗಿ ಫ್ರಾನ್ಸ್‌ ಪ್ರಧಾನ ಮಂತ್ರಿ ಜೀನ್ ಕ್ಯಾಸ್ಟೆಕ್ಸ್‌ ಪ್ರಕಟಿಸಿದ್ದಾರೆ.

ಇದೇ ಸಂದರ್ಭದಲ್ಲಿ ಐರೋಪ್ಯ ಒಕ್ಕೂಟ ಸೇರಿದಂತೆ ಬೇರೆ ಬೇರೆ ದೇಶಗಳಿಂದ ಫ್ರಾನ್ಸ್‌ಗೆ ಬರುವವರಿಗೆ ರೂಪಿಸಿರುವ ಹೊಸದಾದ ನಿಯಮಗಳನ್ನು ಪ್ರಧಾನಿ ಪ್ರಕಟಿಸಿದರು.

ಸೋಮವಾರದಿಂದ, ದೇಶಕ್ಕೆ ಪ್ರವೇಶಿಸುವ ಪ್ರಯಾಣಿಕರು ಕಡ್ಡಾಯವಾಗಿ ಪಿಸಿಆರ್‌ ಪರೀಕ್ಷೆ ಮಾಡಿಸಿ ನೆಗೆಟಿವ್ ವರದಿ ಹೊಂದಿರಬೇಕು. ನೆಗೆಟಿವ್ ವರದಿ ಇದ್ದರೂ, ಸ್ವಯಂ ಪ್ರೇರಿತವಾಗಿ ಏಳು ದಿನಗಳಕಾಲ ಕ್ವಾರಂಟೈನ್ಗ್‌ ಗೆ ಒಳಪಡಬೇಕು ಎಂಬ ನಿಯಮಗಳನ್ನು ಹೊಸದಾಗಿ ಸೇರಿಸಲಾಗಿದೆ.

ADVERTISEMENT

ಕೊರೊನಾಸೋಂಕು ತಡೆ ಸಂಬಂಧ ಮೂರನೇ ಲಾಕ್‌ಡೌನ್ ಹೇರುವುದನ್ನು ತಪ್ಪಿಸಲು ಕರ್ಫ್ಯೂದಂತಹ ಕ್ರಮಗಳನ್ನು ಫ್ರೆಂಚ್ ಸರ್ಕಾರ ಮುಂದುವರಿಸುತ್ತಿದೆ. ಈಗಾಗಲೇ ಹೆಚ್ಚಿನ ಪ್ರದೇಶಗಳಲ್ಲಿ ರಾತ್ರಿ 8ರ ನಂತರ ಕರ್ಫ್ಯೂ ಇದೆ. ಇನ್ನು ಮುಂದೆ ಸಂಜೆ 6 ರೊಳಗೆ ಎಲ್ಲರೂ ಮನೆಯಲ್ಲೇ ಇರಬೇಕು. ಅಂದರೆ, ಅಂಗಡಿ ಮುಂಗಟ್ಟುಗಳು ಬಂದ್‌ ಆಗಿರಬೇಕು‘ ಎಂದು ಪ್ರಧಾನಿ ಕ್ಯಾಸ್ಟೆಕ್ಸ್‌ ತಿಳಿಸಿದ್ದಾರೆ. ಈಗಾಗಲೇ ಒಂದು ತಿಂಗಳಿನಿಂದ ಬಾರ್‌ ಮತ್ತು ರೆಸ್ಟೋರೆಂಟ್‌ಗಳು ಬಂದ್ ಆಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.