ADVERTISEMENT

ಜಗವ ಬೆಳಗುತ್ತಿರುವ ಪೆರಿಯಾರ್ ಕ್ರಾಂತಿಕಾರಿ ಬೆಳಕು: Oxfordನಲ್ಲಿ CM ಸ್ಟಾಲಿನ್

ಪಿಟಿಐ
Published 5 ಸೆಪ್ಟೆಂಬರ್ 2025, 6:09 IST
Last Updated 5 ಸೆಪ್ಟೆಂಬರ್ 2025, 6:09 IST
<div class="paragraphs"><p>ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸೇಂಟ್ ಆಂಥೋನಿ ಕಾಲೇಜಿನಲ್ಲಿ ಪೆರಿಯಾರ್ ಅವರ ಭಾವಚಿತ್ರವನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅನಾವರಣಗೊಳಿಸಿದರು</p></div>

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸೇಂಟ್ ಆಂಥೋನಿ ಕಾಲೇಜಿನಲ್ಲಿ ಪೆರಿಯಾರ್ ಅವರ ಭಾವಚಿತ್ರವನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅನಾವರಣಗೊಳಿಸಿದರು

   

ಎಕ್ಸ್ ಚಿತ್ರ

ಚೆನ್ನೈ: ‘ಶತಮಾನದ ಹಿಂದೆ ಸಾಮಾಜಿಕ ಸುಧಾರಕ ಪೆರಿಯಾರ್ (ಇ.ವಿ. ರಾಮಾಸ್ವಾಮಿ) ಆಂಭಿಸಿದ ಸ್ವಾಭಿಮಾನಿ ಹೋರಾಟವು ಸ್ವಾತಂತ್ರ್ಯವನ್ನು ಮರುವ್ಯಾಖ್ಯಾನಿಸಿದ್ದರ ಪರಿಣಾಮ ಸಂಕೋಲೆ ಕಳಚಿ ಘನತೆ ಹೆಚ್ಚಿಸಿತ್ತು. ಪರಿಣಾಮ ಇಂದು ಆ ಕ್ರಾಂತಿಕಾರಿ ಬೆಳಕು  ಜಗತ್ತಿನ್ನೇ ಬೆಳಗುತ್ತಿದೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.

ADVERTISEMENT

ಸ್ವಾಭಿಮಾನಿ ಆಂದೋಲನದ ಶತಮಾನೋತ್ಸವ ಸಂದರ್ಭದಲ್ಲಿ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸೇಂಟ್ ಆಂಥೋನಿ ಕಾಲೇಜಿನಲ್ಲಿ ಪೆರಿಯಾರ್ ಅವರ ಭಾವಚಿತ್ರ ಅನಾವರಣಗೊಳಿಸಿ ಅವರು ಮಾತನಾಡಿದರು.

‘ಪೆರಿಯಾರ್ ಅವರು ಪ್ರತಿಪಾದಿಸಿದ ವೈಚಾರಿಕತೆ, ಲಿಂಗ ಸಮಾನತೆ ಮತ್ತು ಜಾತಿ ವಿರೋಧಿ ಸುಧಾರಣೆಗಳು ಜಾಗತಿಕ ಮಟ್ಟದಲ್ಲಿ ಸಮಾಜ ಸುಧಾರಣೆಗೆ ಮಹತ್ವದ ಕೊಡುಗೆ ನೀಡಿವೆ. ಜ್ಞಾನ, ಮಾನವ ಹಕ್ಕು ಮತ್ತು ಘನತೆಗೆ ಹೆಸರಾದ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಪೆರಿಯಾರ್ ಅವರ ಭಾವಚಿತ್ರ ಅನಾವರಣದ ಅವಕಾಶ ದೊರೆತಿರುವುದು ನನ್ನ ಬದುಕಿಗೆ ಸಂದ ಗೌರವವಾಗಿದೆ. ಪೆರಿಯಾರ್ ಅವರ ಕ್ರಾಂತಿಕಾರಿ ಬೆಳಕು ಈಗ ತಮಿಳುನಾಡಿನ ಗಡಿದಾಟಿ ಜಗತ್ತನ್ನು ಬೆಳಗುತ್ತಿದೆ’ ಎಂದಿದ್ದಾರೆ.

ಭಾರತೀಯ ಕಲಾವಿದ ತೊಟ್ಟ ಥರಣಿ ಅವರು ಈ ಪೆರಿಯಾರ್ ಅವರ ಭಾವಚಿತ್ರವನ್ನು ರಚಿಸಿದ್ದಾರೆ. 

‘ಪೆರಿಯಾರ್ ಅವರ ಸ್ವಾಭಿಮಾನ ಹೋರಾಟವು ಸ್ವಾತಂತ್ರ್ಯವನ್ನು ಮರುವ್ಯಾಖ್ಯಾನಿಸಿದ್ದರ ಪರಿಣಾಮ ಸಂಕೋಲೆಗಳು ಕಳಚಿತು, ಜನರ ಘನತೆ ಹೆಚ್ಚಿತು. ಪೆರಿಯಾರ್ ಅವರ ಸ್ವಾಭಿಮಾನವು ಮೂಲಭೂತವಾದವನ್ನು ತೊಡೆದುಹಾಕಿತು. ವೈಜ್ಞಾನಿಕ ಆಲೋಚನೆ ಬೆಳೆಯುವಂತೆ ಮಾಡಿತು. ಸಾಮಾಜಿಕ ಪರಿವರ್ತನೆಯ ಹಾದಿಯ ಕಡೆ ಬೆಳಕು ಹರಿಯುವಂತೆ ಮಾಡಿತು’ ಎಂದು ಮುಖ್ಯಮಂತ್ರಿ ಸ್ಟಾಲಿನ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಪೆರಿಯಾರ್ ಅವರ ಸ್ವಾಭಿಮಾನದ ಪರಂಪರೆಯ ಕ್ರಾಂತಿಯು ಶತಮಾನಗಳ ಅಧೀನತೆಯನ್ನು ಸ್ವಾಭಿಮಾನಿ ಕ್ರಾಂತಿಯ ಗೀತೆಯನ್ನಾಗಿ ಪರಿವರ್ತಿಸಿತು. ನಾವು ಕೇವಲ ಇತಿಹಾಸವನ್ನು ಆಚರಿಸುತ್ತಿಲ್ಲ, ಬದಲಿಗೆ ಭವಿಷ್ಯಕ್ಕೆ ಮಾರ್ಗದರ್ಶನ ಮಾಡುತ್ತಿದ್ದೇವೆ’ ಎಂದು ಸ್ಟಾಲಿನ್‌ ಹೇಳಿದ್ದಾರೆ. 

ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ ಸ್ಟಾಲಿನ್ ಅವರು ಸದ್ಯ ಯುರೋಪ್‌ ಪ್ರವಾಸದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.