ADVERTISEMENT

ಪೆರು: ಲಘು ವಿಮಾನ ಅಪಘಾತ, 7 ಮಂದಿ ಸಾವು

ಏಜೆನ್ಸೀಸ್
Published 5 ಫೆಬ್ರುವರಿ 2022, 12:19 IST
Last Updated 5 ಫೆಬ್ರುವರಿ 2022, 12:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಿಮಾ: ಪೆರುವಿನ ಮರುಭೂಮಿಯಲ್ಲಿನ ನಾಜ್ಕಾ ರೇಖೆಗಳ ಮರಳಿನ ಸ್ಮಾರಕದ ವೀಕ್ಷಣೆಗೆ ಪ್ರವಾಸಿಗರನ್ನು ಹೊತ್ತುಯ್ಯುತ್ತಿದ್ದ ಲಘು ವಿಮಾನವೊಂದು ಶುಕ್ರವಾರ ಅಪಘಾಕ್ಕೀಡಾಗಿದ್ದು, ಅದರಲ್ಲಿದ್ದ ಏಳೂ ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ವಿಮಾನವು ನಗರದ ವಾಯುನೆಲೆಯ ಬಳಿ ಅಪಘಾತಕ್ಕೀಡಾಗಿದೆ. ಅವಘಡದಲ್ಲಿ ಯಾರೂ ಬದುಕುಳಿದಿಲ್ಲ’ ಎಂದು ನಾಜ್ಕಾದಲ್ಲಿನ 82 ನೇ ಅಗ್ನಿಶಾಮಕ ಕಂಪನಿಯ ಅಗ್ನಿಶಾಮಕ ದಳದ ಬ್ರಿಗೇಡಿಯರ್ ಜುವಾನ್ ಟಿರಾಡೊ ಹೇಳಿದರು.

ಪ್ರವಾಸ ಕಂಪನಿಯಾದ ಏರೋ ಸ್ಯಾಂಟೋಸ್‌ಗೆ ವಿಮಾನ ಸೇರಿದೆ. ‘ವಿಮಾನದಲ್ಲಿ ಐದು ಮಂದಿ ಪ್ರವಾಸಿಗರು, ಪೈಲಟ್‌ ಮತ್ತು ಸಹ ಪೈಲಟ್‌ ಇದ್ದರು. ಪ್ರವಾಸಿಗರ ರಾಷ್ಟ್ರೀಯತೆ ಮತ್ತು ಗುರುತುಗಳು ಇನ್ನೂ ಪತ್ತೆಯಾಗಿಲ್ಲ’ ಎಂದು ಕಂಪನಿ ಹೇಳಿದೆ.

ADVERTISEMENT

ನಾಜ್ಕಾ ರೇಖೆಗಳು 1,500 ಮತ್ತು 2,000 ವರ್ಷಗಳ ಹಿಂದೆ ಕರಾವಳಿ ಮರುಭೂಮಿಯ ಮೇಲ್ಮೈಯಲ್ಲಿ ರಚಿಸಲಾದ ಕಾಲ್ಪನಿಕ ವ್ಯಕ್ತಿಗಳು, ಜೀವಿಗಳು ಮತ್ತು ಸಸ್ಯಗಳ ಆಕೃತಿಗಳ ಬೃಹತ್ ಸ್ಮಾರಕಗಳಾಗಿವೆ. ಇವು ಯುನೆಸ್ಕೊನ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.