ಬಾಲಿ, ಇಂಡೊನೇಷ್ಯಾ: ಜಿ–20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇಲ್ಲಿರುವ ಭಾರತೀಯ ಸಮುದಾಯದೊಂದಿಗೆ ಮಂಗಳವಾರ ಸಂವಾದ ನಡೆಸಿದರು.
ಸಂವಾದ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದ ಸಭಾಗೃಹಕ್ಕೆ ಮೋದಿ ಅವರು ಪ್ರವೇಶಿಸುತ್ತಿದ್ದಂತೆಯೇ, ಭಾರತೀಯರಿಂದ ಭಾರಿ ಕರತಾಡನ, ಹರ್ಷೋದ್ಗಾರ ಕಂಡುಬಂತು.
‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಗಳು ಸಭಾಗೃಹದಲ್ಲಿ ಮಾರ್ದನಿಸಿದವು. ಭಾರತೀಯ ವೇಷಭೂಷಣದಲ್ಲಿದ್ದ ಜನರು, ವಂದಿಸುವ ರೀತಿಯಲ್ಲಿ ಕೈಗಳನ್ನು ಜೋಡಿಸಿ ಮೋದಿ ಅವರಿಗೆ ಸ್ವಾಗತ ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.