ADVERTISEMENT

ರಷ್ಯಾದ 19 ಡ್ರೋನ್‌ಗಳನ್ನು ಹೊಡೆದುರುಳಿಸಿದ ಪೋಲೆಂಡ್‌

ರಾಯಿಟರ್ಸ್
Published 10 ಸೆಪ್ಟೆಂಬರ್ 2025, 12:59 IST
Last Updated 10 ಸೆಪ್ಟೆಂಬರ್ 2025, 12:59 IST
<div class="paragraphs"><p>ರಷ್ಯಾ ಪಡೆಗಳು ಉಡಾಯಿಸಿದ್ದ ಡ್ರೋನ್‌ಅನ್ನು ಪೋಲೆಂಡ್‌ ಸೇನೆ ಬಿಯಾಲಾ ಪೋಡ್ಲಾಸ್ಕ ಬಳಿ ಬುಧವಾರ ಹೊಡೆದುರುಳಿಸಿದ ನಂತರ ಘಟನಾ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು&nbsp;&nbsp;</p></div>

ರಷ್ಯಾ ಪಡೆಗಳು ಉಡಾಯಿಸಿದ್ದ ಡ್ರೋನ್‌ಅನ್ನು ಪೋಲೆಂಡ್‌ ಸೇನೆ ಬಿಯಾಲಾ ಪೋಡ್ಲಾಸ್ಕ ಬಳಿ ಬುಧವಾರ ಹೊಡೆದುರುಳಿಸಿದ ನಂತರ ಘಟನಾ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು  

   

ವಾರ್ಸಾ (ರಾಯಿಟರ್ಸ್‌): ತನ್ನ ವಾಯುಪ್ರದೇಶ ಪ್ರವೇಶಿಸಿದ್ದ ರಷ್ಯಾದ 19 ಡ್ರೋನ್‌ಗಳನ್ನು ಹೊಡೆದುರುಳಿಸಿದ್ದಾಗಿ ಪೋಲೆಂಡ್‌ ಬುಧವಾರ ಹೇಳಿದೆ. ಈ ಮೂಲಕ ರಷ್ಯಾ ಮತ್ತು ಉಕ್ರೇನ್‌ ನಡುವೆ ಯುದ್ಧ ಆರಂಭವಾದ ನಂತರ, ನ್ಯಾಟೊ ಸದಸ್ಯರಾಷ್ಟ್ರವೊಂದರ ಮೇಲೆ ರಷ್ಯಾ ಪಡೆಗಳು ಇದೇ ಮೊದಲ ಬಾರಿಗೆ ದಾಳಿ ನಡೆಸಿದಂತಾಗಿದೆ. 

ಪೋಲೆಂಡ್‌ ಪ್ರಧಾನಿ ಡೊನಾಲ್ಡ್‌ ಟಸ್ಕ್‌ ಈ ಬಗ್ಗೆ ಮಾಹಿತಿ ನೀಡಿದ್ದು,‘ ಭದ್ರತೆಗೆ ಬೆದರಿಕೆ ಒಡ್ಡಿದ ಡ್ರೋನ್‌ಗಳನ್ನು ಈಗಾಗಲೇ ಹೊಡೆದುರುಳಿಸಿದ್ದೇವೆ.  ಇದಕ್ಕೆ ತಕ್ಕ ತಿರುಗೇಟು ನೀಡಲಾಗುವುದು. ಈ ಸಂಬಂಧ ನ್ಯಾಟೊ ಸದಸ್ಯ ರಾಷ್ಟ್ರಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು’ ಎಂದಿದ್ದಾರೆ. 

ADVERTISEMENT

ರಾತ್ರಿ ಕಾರ್ಯಾಚರಣೆ:

ರಾತ್ರೋರಾತ್ರಿ ರಷ್ಯಾದ ಡ್ರೋನ್‌ಗಳು ಪೋಲೆಂಡ್‌ ವಾಯುಪ್ರದೇಶಕ್ಕೆ ಲಗ್ಗೆ ಇಟ್ಟಿದ್ದವು. 10ಕ್ಕೂ ಹೆಚ್ಚು ಡ್ರೋನ್‌ಗಳನ್ನು ಹೊಡೆದುರುಳಿಸಲಾಯಿತು ಎಂದು ಮೂಲಗಳು ಹೇಳಿವೆ.

ಕಾರ್ಯಾಚರಣೆಗೆ ತೊಡಕು:

ರಷ್ಯಾ ಡ್ರೋನ್‌ಗಳ ದಾಳಿಯಿಂದಾಗಿ ಪೋಲೆಂಡ್‌ನ ವಿವಿಧ ವಿಮಾನ ನಿಲ್ದಾಣಗಳ ಕಾರ್ಯಾಚರಣೆಗಳಿಗೆ ಸ್ವಲ್ಪ ಕಾಲ ಅಡ್ಡಿಯುಂಟಾಗಿತ್ತು. ವಾರ್ಸಾದಲ್ಲಿರುವ ದೇಶದ ಅತ್ಯಂತ ದೊಡ್ಡ ವಿಮಾನ ನಿಲ್ದಾಣ ಕೂಡ ಕೆಲ ಗಂಟೆಗಳು ಕಾರ್ಯಾಚರಣೆ ಸ್ಥಗಿತಗೊಳಿಸಿ ಮತ್ತೆ ಆರಂಭಿಸಿತು. ಪೂರ್ವ ಪೋಲೆಂಡ್‌ನ ಲುಬಿನ್‌ ವಿಮಾನ ನಿಲ್ದಾಣವು ದಿನದ ಮಟ್ಟಕ್ಕೆ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು.

ಆರೋಪ ಒಪ್ಪದ ರಷ್ಯಾ
‘ಪೋಲೆಂಡ್‌ ಆರೋಪಗಳು ಆಧಾರರಹಿತ’ ಎಂದು ರಷ್ಯಾ ರಾಯಭಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ‘ತಾನು ಹೊಡೆದುರುಳಿಸಿರುವ ಡ್ರೋನ್‌ಗಳು ರಷ್ಯಾಕ್ಕೆ ಸೇರಿದವು ಎನ್ನುವ ಬಗ್ಗೆ ಪೋಲೆಂಡ್‌ ಯಾವುದೇ ಪುರಾವೆಗಳನ್ನು ಒದಗಿಸಿಲ್ಲ ಎಂಬುದಾಗಿ ರಷ್ಯಾ ಅಧಿಕಾರಿಗಳು ಹೇಳಿದ್ದಾರೆ’ ಎಂದೂ ಮಾಧ್ಯಮಗಳು ವರದಿ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.