ADVERTISEMENT

ನೀಲಿಚಿತ್ರ ತಾರೆಗೆ ಹಣ ಸಂದಾಯ | ಟ್ರಂಪ್ ವಿರುದ್ಧ ದೋಷಾರೋಪಣೆ

ಪಿಟಿಐ
Published 31 ಮಾರ್ಚ್ 2023, 5:01 IST
Last Updated 31 ಮಾರ್ಚ್ 2023, 5:01 IST
ಡೊನಾಲ್ಡೊ ಟ್ರಂಪ್
ಡೊನಾಲ್ಡೊ ಟ್ರಂಪ್   

ನ್ಯೂಯಾರ್ಕ್: ನೀಲಿಚಿತ್ರ ತಾರೆಗೆ ಹಣ ಪಾವತಿ ಮಾಡಿರುವ ಪ್ರಕರಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಮ್ಯಾನ್‌ಹ್ಯಾಟನ್ ಗ್ರ್ಯಾಂಡ್ ಜ್ಯೂರಿ ದೋಷಾರೋಪಣೆ ಸಲ್ಲಿಸಿದೆ.

ವಿಚಾರಣೆ ನಡೆಸುತ್ತಿರುವ ಮ್ಯಾನ್‌ಹ್ಯಾಟನ್ ಜಿಲ್ಲಾ ಅಟಾರ್ನಿ ಆಲ್ವಿನ್ ಬ್ರಾಗ್ ಅವರ ಕಚೇರಿಯು, ಗುರುವಾರ ಸಂಜೆ ಟ್ರಂಪ್ ಅವರ ವಕೀಲರನ್ನು ಸಂಪರ್ಕಿಸಿ, ಟ್ರಂಪ್ ಶರಣಾಗತಿಗೆ ಸಹಕರಿಸುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ಆದರೆ ತಮ್ಮ ಮೇಲಿನ ಆರೋಪ ನಿರಾಕರಿಸಿರುವ ಟ್ರಂಪ್, ಈ ದೋಷಾರೋಪಣೆ ಇತಿಹಾಸದಲ್ಲೇ ಅತ್ಯುನ್ನತ ಮಟ್ಟದ ರಾಜಕೀಯ ಕಿರುಕುಳ ಮತ್ತು ಚುನಾವಣಾ ಹಸ್ತಕ್ಷೇಪ ಎಂದು ಖಂಡಿಸಿದ್ದಾರೆ.

2016ರ ಅಧ್ಯಕ್ಷೀಯ ಚುನಾವಣೆ ಪ್ರಚಾರ ಸಂದರ್ಭದಲ್ಲಿ ತಮ್ಮ ಜತೆಗಿನ ಸಂಬಂಧ ಬಹಿರಂಗಪಡಿಸದಿರಲು ನೀಲಿಚಿತ್ರ ತಾರೆಗೆ ಟ್ರಂಪ್ ಹಣ ಸಂದಾಯ ಮಾಡಿದ್ದ ಪ್ರಕರಣ ಇದಾಗಿದೆ.

ಈ ಮೂಲಕ ಅಪರಾಧದ ಆರೋಪ ಹೊತ್ತ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಎಂಬ ಅಪಖ್ಯಾತಿಗೆ ಟ್ರಂಪ್ ಒಳಗಾಗಿದ್ದಾರೆ. ಇದರೊಂದಿಗೆ ಟ್ರಂಪ್‌ಗೆ ಬಂಧನ ಭೀತಿ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.