ADVERTISEMENT

ಖಲಿಸ್ತಾನ ಬೆಂಬಲಿತರಿಂದ ಇಟಲಿಯ ಭಾರತ ರಾಜತಾಂತ್ರಿಕ ಕಚೇರಿಗೆ ಹಾನಿ

ಏಜೆನ್ಸೀಸ್
Published 28 ಜನವರಿ 2021, 16:14 IST
Last Updated 28 ಜನವರಿ 2021, 16:14 IST
ಖಲಿಸ್ತಾನ್ ಬೆಂಬಲಿತ ಪೋಸ್ಟರ್‌ಗಳು–ಸಾಂದರ್ಭಿಕ ಚಿತ್ರ
ಖಲಿಸ್ತಾನ್ ಬೆಂಬಲಿತ ಪೋಸ್ಟರ್‌ಗಳು–ಸಾಂದರ್ಭಿಕ ಚಿತ್ರ   

ರೋಮ್‌: ಖಲಿಸ್ತಾನ ಬೆಂಬಲಿತರ ಗುಂಪು ಇಟಲಿಯ ರೋಮ್‌ನಲ್ಲಿರುವ ಭಾರತದ ರಾಜತಾಂತ್ರಿಕ ಕಚೇರಿಗೆ ಹಾನಿ ಮಾಡಿರುವುದಾಗಿ ವರದಿಯಾಗಿದೆ. ಜನವರಿ 26, ಭಾರತದ ಗಣರಾಜ್ಯೋತ್ಸವದ ದಿನದಂದು ಈ ಘಟನೆ ನಡೆದಿದೆ.

'ಈ ನಿರ್ದಿಷ್ಟ ಘಟನೆಯ ಬಗ್ಗೆ ಇಟಲಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ನಮ್ಮ ಕಳಕಳಿಯನ್ನು ವ್ಯಕ್ತಪಡಿಸಿದ್ದೇವೆ. ಭಾರತದ ಅಧಿಕಾರಿಗಳು ಸುರಕ್ಷತೆ ಮತ್ತು ರಾಜತಾಂತ್ರಿಕ ಕಚೇರಿಯ ಭದ್ರತೆಯ ಜವಾಬ್ದಾರಿ ಆತಿಥೇಯ ರಾಷ್ಟ್ರದ್ದಾಗಿರುತ್ತದೆ' ಎಂದು ಮೂಲಗಳು ಹೇಳಿರುವುದಾಗಿ ವರದಿಯಾಗಿದೆ.

ದುಷ್ಕರ್ಮಿಗಳ ವಿರುದ್ಧ ಇಟಲಿ ಸರ್ಕಾರ ಕ್ರಮಕೈಗೊಳ್ಳುವ ಹಾಗೂ ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ನಡೆಯದಂತೆ ನಿಯಂತ್ರಿಸಲಿದೆ ಎಂದು ಭಾರತ ಸರ್ಕಾರವು ಭರವಸೆ ವ್ಯಕ್ತಪಡಿಸಿದೆ.

ADVERTISEMENT

ವಾಷಿಂಗ್ಟನ್‌ ಡಿಸಿಯಲ್ಲಿನ ಭಾರತದ ರಾಜತಾಂತ್ರಿಕ ಕಚೇರಿಯ ಹೊರಗೆ ಖಲಿಸ್ತಾನಿ ಹೋರಾಟಗಾರರ ಗುಂಪು ಹಾಗೂ ಇತರರು ಮಂಗಳವಾರ ರೈತರನ್ನು ಬೆಂಬಲಿಸಿದ್ದರು. ಸಿಖ್‌ ಡಿಎಂವಿ ಯೂಥ್‌ ಮತ್ತು ಸಂಗತ್‌ಗೆ ಸೇರಿದ ಹತ್ತಾರು ಮಂದಿ ರಾಜತಾಂತ್ರಿಕ ಕಚೇರಿಯ ಹೊರಗೆ ಸೇರಿ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾಯ್ದೆಗಳಿಗೆ ವಿರೋಧ ವ್ಯಕ್ತಿಸಿದರು. ಖಲಿಸ್ತಾನ ಹೋರಾಟದ ಧ್ವಜಗಳನ್ನು ಹಿಡಿದಿದ್ದ ಗುಂಪಿ ಭಾರತ ವಿರೋಧಿ ಘೋಷಣೆಗಳನ್ನು ಕೂಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.