ADVERTISEMENT

ಗಡಿ ಸಂಘರ್ಷ: ಭಾರತದಿಂದ ಸಮರ್ಥ ನಿರ್ವಹಣೆ- ಅಮೆರಿಕ ಸಂಸದ ಶ್ಲಾಘನೆ

ಚೀನಾದಿಂದ ಗಡಿ ಉದ್ವಿಗ್ನತೆ

ಪಿಟಿಐ
Published 10 ಜುಲೈ 2020, 6:10 IST
Last Updated 10 ಜುಲೈ 2020, 6:10 IST
ಜಾನ್‌ ಕೆನಡಿ
ಜಾನ್‌ ಕೆನಡಿ   

ವಾಷಿಂಗ್ಟನ್‌: ಗಡಿಯಲ್ಲಿ ಚೀನಾ ನಿರ್ಮಿಸಿದ್ದ ಉದ್ವಿಗ್ನ ಸ್ಥಿತಿಯನ್ನು ಭಾರತ ಸಮರ್ಥವಾಗಿ ಎದುರಿಸಿದೆ. ಇದು ಚೀನಾದಿಂದ ಒದಗುವ ಬೆದರಿಕೆಯನ್ನು ಧೈರ್ಯದಿಂದ ಎದುರಿಸಲು ಇತರ ದೇಶಗಳಿಗೆ ಶಕ್ತಿ ತುಂಬಲಿದೆ ಎಂದು ಅಮೆರಿಕದ ಸಂಸದ ಜಾನ್‌ ಕೆನಡಿ ಹೇಳಿದ್ದಾರೆ.

‘ಚೀನಾಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹೆಮ್ಮೆ ಎನಿಸುತ್ತದೆ. ಕೆನಡಾ ನಡೆಯ ಬಗ್ಗೆಯೂ ಹೆಮ್ಮೆ ಎನಿಸುತ್ತದೆ. ಈಗ ಯಾವ ದೇಶವೂ ಅಂಜಿಕೊಂಡು, ಅವಿತುಕೊಳ್ಳದೇ ಸಮರ್ಥ ಉತ್ತರ ನೀಡುತ್ತಿವೆ’ ಎಂದು ರಿ‍ಪಬ್ಲಿಕನ್‌ ಸಂಸದ ಕೆನಡಿ ಅವರು ಫಾಕ್ಸ್‌ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ಕಾನೂನು ಪ್ರಕಾರವೇ ನಡೆದುಕೊಳ್ಳಬೇಕು ಎಂಬ ಅಂಶವನ್ನು ಅಮೆರಿಕ ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯಚೀನಾದ ಕಮ್ಯುನಿಸ್ಟ್‌ ಪಾರ್ಟಿಗೆ ಮನದಟ್ಟು ಮಾಡಬೇಕಾಗಿದೆ’ ಎಂದೂ ಅವರು ಪ್ರತಿಪಾದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.