ADVERTISEMENT

ಚೀನಾ, ಭಾರತ ಒಳಗೊಂಡ ಸಮರಾಭ್ಯಾಸದಲ್ಲಿ ಭಾಗವಹಿಸಿದ ಪುಟಿನ್‌

ಏಜೆನ್ಸೀಸ್
Published 6 ಸೆಪ್ಟೆಂಬರ್ 2022, 13:02 IST
Last Updated 6 ಸೆಪ್ಟೆಂಬರ್ 2022, 13:02 IST
ಸಮರಾಭ್ಯಾಸ ವೀಕ್ಷಿಸುತ್ತಿರುವ ವ್ಲಾಡಿಮಿರ್‌ ಪುಟಿನ್‌ – ಎಪಿ ಚಿತ್ರ
ಸಮರಾಭ್ಯಾಸ ವೀಕ್ಷಿಸುತ್ತಿರುವ ವ್ಲಾಡಿಮಿರ್‌ ಪುಟಿನ್‌ – ಎಪಿ ಚಿತ್ರ   

ಮಾಸ್ಕೋ: ಉಕ್ರೇನ್‌ ವಿಚಾರದಲ್ಲಿ ಪಾಶ್ಚಾತ್ಯ ರಾಷ್ಟ್ರಗಳೊಂದಿಗೆ ಉದ್ವಿಗ್ನತೆಯ ನಡುವೆಯೇ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ರಷ್ಯಾದ ಪೂರ್ವ ಭಾಗದಲ್ಲಿ ಚೀನಾ, ಭಾರತ ಹಾಗೂ ಇತರ ಕೆಲವು ರಾಷ್ಟ್ರಗಳ ಸೈನ್ಯವನ್ನೊಳಗೊಂಡ ಸಮರಾಭ್ಯಾಸದಲ್ಲಿ ಮಂಗಳವಾರ ಭಾಗವಹಿಸಿದರು.

ಸಮರಾಭ್ಯಾಸವು ಗುರುವಾರದಿಂದಲೇ ಆರಂಭವಾಗಿದ್ದು, ರಷ್ಯಾ ಮತ್ತು ಚೀನಾ ನಡುವೆ ಬೆಳೆಯುತ್ತಿರುವ ರಕ್ಷಣಾ ಸಂಬಂಧಗಳನ್ನು ಪ್ರದರ್ಶಿಸುವ ಉದ್ದೇಶವನ್ನು ಹೊಂದಿದೆ. ರಷ್ಯಾದ ಪಡೆಗಳು ಉಕ್ರೇನ್‌ನಲ್ಲಿ ಹೋರಾಡುತ್ತಿರುವಾಗಲೂ ಬೃಹತ್‌ ಪ್ರಮಾಣದ ಸಮರಾಭ್ಯಾಸ ನಡೆಸಲು ಸಾಕಷ್ಟು ಸೈನ್ಯ ಮತ್ತು ಸಾಧನಗಳನ್ನು ಹೊಂದಿದೆ ಎಂಬುದನ್ನು ತೋರಿಸುವುದೇ ಇದರ ಉದ್ದೇಶ ಎನ್ನಲಾಗಿದೆ.

ರಷ್ಯಾ ಮತ್ತು ಜಪಾನ್ ಸಮುದ್ರದ ಏಳು ಫೈರಿಂಗ್ ಪ್ರದೇಶಗಳಲ್ಲಿ ಬುಧವಾರದವರೆಗೆ ವೋಸ್ಟಾಕ್ 2022 (ಪೂರ್ವ 2022) ಸಮಾರಾಭ್ಯಾಸ ನಡೆಯಲಿದ್ದು, 50,000ಕ್ಕೂ ಹೆಚ್ಚು ಸೈನಿಕರು, 140 ಯುದ್ಧ ವಿಮಾನಗಳು ಮತ್ತು 60 ಯುದ್ಧನೌಕೆಗಳು ಸೇರಿದಂತೆ 5,000ಕ್ಕೂ ಹೆಚ್ಚು ಶಸ್ತ್ರಾಸ್ತ್ರ ಘಟಕಗಳನ್ನು ಒಳಗೊಂಡಿರುತ್ತದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.

ADVERTISEMENT

ಈ ಸಮಾರಾಭ್ಯಾಸದಲ್ಲಿ ಮಾಜಿ ಸೋವಿಯತ್ ಒಕ್ಕೂಟದ ರಾಷ್ಟ್ರಗಳು, ಲಾವೋಸ್, ಮಂಗೋಲಿಯಾ, ನಿಕರಾಗುವಾ ಮತ್ತು ಸಿರಿಯಾಗಳೂ ಪಾಲ್ಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.