ADVERTISEMENT

ಉಕ್ರೇನ್ ಮೇಲಿನ ಮಿಲಿಟರಿ ಕಾರ್ಯಾಚರಣೆ ಉದಾತ್ತ ಗುರಿಗಳನ್ನು ಸಾಧಿಸುತ್ತದೆ: ಪುಟಿನ್

ರಾಯಿಟರ್ಸ್
Published 12 ಏಪ್ರಿಲ್ 2022, 9:40 IST
Last Updated 12 ಏಪ್ರಿಲ್ 2022, 9:40 IST
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್   

ಉಕ್ರೇನ್‌ನಲ್ಲಿನ ಮಾಸ್ಕೋದ ಮಿಲಿಟರಿ ಕಾರ್ಯಾಚರಣೆಯು ನಿಸ್ಸಂದೇಹವಾಗಿ ಅದರ 'ಉದಾತ್ತ' ಉದ್ದೇಶಗಳನ್ನು ಸಾಧಿಸುತ್ತದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಂಗಳವಾರ ತಿಳಿಸಿದ್ದಾರೆ.

ವೊಸ್ಟೊಚ್ನಿ ಕಾಸ್ಮೋಡ್ರೋಮ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಷ್ಯಾವನ್ನು ರಕ್ಷಿಸಿಕೊಳ್ಳಲು ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸುವುದನ್ನು ಬಿಟ್ಟು ಮಾಸ್ಕೋಗೆ ಬೇರೆ ದಾರಿಯಿರಲಿಲ್ಲ ಮತ್ತು ಉಕ್ರೇನ್‌ನ ರಷ್ಯಾ ವಿರೋಧಿ ಪಡೆಗಳೊಂದಿಗೆ ಘರ್ಷಣೆ ಅನಿವಾರ್ಯವಾಗಿತ್ತು ಎಂದು ಹೇಳಿರುವುದಾಗಿ ರಷ್ಯಾದ ಸುದ್ದಿ ಸಂಸ್ಥೆಗಳು ಉಲ್ಲೇಖಿಸಿವೆ.

ಫೆಬ್ರುವರಿ 24 ರಂದು ರಷ್ಯಾ ಹತ್ತು ಸಾವಿರ ಸೈನಿಕರನ್ನು ಉಕ್ರೇನ್‌ಗೆ ಕಳುಹಿಸಿತು. ಅದರ ದಕ್ಷಿಣದ ನೆರೆಯ ದೇಶದ ಮಿಲಿಟರಿ ಸಾಮರ್ಥ್ಯವನ್ನು ಕುಗ್ಗಿಸಲು ಮತ್ತು ಅಪಾಯಕಾರಿ ರಾಷ್ಟ್ರೀಯತಾವಾದಿಗಳೆಂದು ಕರೆಯಲ್ಪಡುವ ಜನರನ್ನು ಬೇರುಸಹಿತ ಕಿತ್ತುಹಾಕಲು ಕೈಗೊಂಡ ವಿಶೇಷ ಕಾರ್ಯಾಚರಣೆ ಎಂದು ಕರೆಯಲಾಯಿತು.

ADVERTISEMENT

ಆದಾಗ್ಯು, ಉಕ್ರೇನ್ ಪಡೆಗಳು ಕಠಿಣ ಪ್ರತಿರೋಧವನ್ನು ಒಡ್ಡುತ್ತಿವೆ ಮತ್ತು ಮಾಸ್ಕೋ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುವ ಪ್ರಯತ್ನದಲ್ಲಿ ರಷ್ಯಾದ ಮೇಲೆ ಪಾಶ್ಚಿಮಾತ್ಯ ದೇಶಗಳು ವ್ಯಾಪಕವಾದ ನಿರ್ಬಂಧಗಳನ್ನು ವಿಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.