
ಮಾಸ್ಕೊ: ಉಕ್ರೇನ್ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಶಾಂತಿ ಒಪ್ಪಂದದ ಸಂದರ್ಭದಲ್ಲಿ ರಷ್ಯಾದ ಬೇಡಿಕೆಗಳನ್ನು ನಿರಾಕರಿಸಿದರೆ ಉಕ್ರೇನ್ ಮೇಲಿನ ಯುದ್ಧವನ್ನು ಮುಂದುವರಿಸುತ್ತೇವೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬುಧವಾರ ಎಚ್ಚರಿಸಿದರು.
ನಾಲ್ಕು ವರ್ಷಗಳ ರಷ್ಯಾ–ಉಕ್ರೇನ್ ಯುದ್ಧವನ್ನು ನಿಲ್ಲಿಸುವ ನಿಟ್ಟಿನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಜತಾಂತ್ರಿಕ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಉಭಯ ದೇಶಗಳ ನಡುವಣ ಬೇಡಿಕೆಗಳ ತಿಕ್ಕಾಟ ಜೋರಾಗಿದೆ.
ಸೇನೆಯ ಉನ್ನತ ಅಧಿಕಾರಿಗಳೊಂದಿಗೆ ವಾರ್ಷಿಕ ಸಭೆ ನಡೆಸಿದ ಪುಟಿನ್, ‘ಗುರಿ ತಲುಪುವುದೇ ರಷ್ಯಾದ ಆದ್ಯತೆ. ಸಂಘರ್ಷದ ಬೇರುಗಳನ್ನು ರಾಜತಾಂತ್ರಿಕ ವಿಧಾನದ ಮೂಲಕ ಕಿತ್ತುಹಾಕುತ್ತೇವೆ. ಆದರೆ ಎದುರಾಳಿ ತಂಡ ಮತ್ತು ಅದರ ಮಿತ್ರ ರಾಷ್ಟ್ರಗಳು ಬೇಡಿಕೆಯನ್ನು ನಿರಾಕರಿಸಿದರೆ ಸೇನಾ ಕಾರ್ಯಾಚರಣೆ ಮೂಲಕ ತನ್ನ ಐತಿಹಾಸಿಕ ಪ್ರದೇಶವನ್ನು ರಷ್ಯಾ ವಶಕ್ಕೆ ಪಡೆಯಲಿದೆ’ ಎಂದು ಹೇಳಿದರು.
ರಷ್ಯಾದ ಪ್ರಮುಖ ಬೇಡಿಕೆಗಳು
*ರಷ್ಯಾ ಪಡೆಗಳು ವಶಕ್ಕೆ ಪಡೆದಿರುವ ನಾಲ್ಕು ಪ್ರಮುಖ ಪ್ರದೇಶಗಳು ರಷ್ಯಾದ ಗಡಿಗೆ ಸೇರಿವೆ ಎಂದು ಘೋಷಿಸಬೇಕು
*ಮಾಸ್ಕೊ ಪಡೆಗಳು ಇನ್ನೂ ವಶಕ್ಕೆ ಪಡೆಯದ ಪೂರ್ವ ಉಕ್ರೇನ್‌ನ ಪ್ರದೇಶಗಳಿಂದ ಉಕ್ರೇನ್ ಹಿಂದೆ ಸರಿಯಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.