ADVERTISEMENT

ಶ್ರೀಲಂಕಾದ ಉತ್ತರ ಭಾಗದಲ್ಲಿ ಭಾರತದ ನೆರವಿನಿಂದ ರೈಲು ಹಳಿ ಕಾಮಗಾರಿ

ಪಿಟಿಐ
Published 9 ಜನವರಿ 2023, 13:43 IST
Last Updated 9 ಜನವರಿ 2023, 13:43 IST
.
.   

ಕೊಲಂಬೊ: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿನ ಉತ್ತರ ಭಾಗದಲ್ಲಿ ಶತಮಾನದಷ್ಟು ಹಳೆಯ ರೈಲ್ವೆ ಹಳಿ ಪುನರ್‌ನಿರ್ಮಾಣ ಕಾಮಗಾರಿ ಭಾರತದ ನೆರವಿನಿಂದ ಸೋಮವಾರ ಆರಂಭಗೊಂಡಿದೆ.

ಒಟ್ಟು 252 ಕಿ.ಮೀ. ಉದ್ದದ ರೈಲು ಮಾರ್ಗದ ಪೈಕಿ ಮೇದವಾಚ್ಚಿಯಾ ಮತ್ತು ಮಧು ರಸ್ತೆ ನಡುವಿನ 43 ಕಿ.ಮೀ.ಉದ್ದದ ಮೊದಲ ಹಂತದ ಕಾಮಗಾರಿಗೆ ಇದೀಗ ಚಾಲನೆ ನೀಡಲಾಗಿದೆ. 81 ದಶಲಕ್ಷ ಡಾಲರ್‌ (₹ 667 ಕೋಟಿ) ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದೆ.

ಭಾರತದ ‘ಇರ್ಕಾನ್‌ ಇಂಟರ್‌ನ್ಯಾಷನಲ್’ ಕಂಪನಿ ಈ ಕಾಮಗಾರಿ ಕೈಗೆತ್ತಿಕೊಂಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.