ADVERTISEMENT

ಇಸ್ರೇಲ್‌–ಯುಎಇ ತೈಲ ಒಪ್ಪಂದ: ಹವಳದ ದಿಬ್ಬಗಳಿಗೆ ಕಂಟಕ?

ಇಸ್ರೇಲ್ ಪರಿಸರ ಕಾರ್ಯಕರ್ತರ ಆತಂಕ, ಒಪ್ಪಂದ ಕುರಿತ ಮರು ಚರ್ಚೆಗೆ ಒತ್ತಾಯ

ಏಜೆನ್ಸೀಸ್
Published 15 ಫೆಬ್ರುವರಿ 2021, 7:42 IST
Last Updated 15 ಫೆಬ್ರುವರಿ 2021, 7:42 IST
ಇಸ್ರೇಲ್‌ನ ಐಲಾಟ್‌ನಲ್ಲಿರುವ ಕೆಂಪು ಸಮುದ್ರದಲ್ಲಿ ಸ್ಕ್ಯೂಬಾ ಡೈವಿಂಗ್‌ನಲ್ಲಿ ತೊಡಗಿರುವ ದೃಶ್ಯ(ಎಎಫ್‌ಪಿ – ಸಂಗ್ರಹ ಚಿತ್ರ)
ಇಸ್ರೇಲ್‌ನ ಐಲಾಟ್‌ನಲ್ಲಿರುವ ಕೆಂಪು ಸಮುದ್ರದಲ್ಲಿ ಸ್ಕ್ಯೂಬಾ ಡೈವಿಂಗ್‌ನಲ್ಲಿ ತೊಡಗಿರುವ ದೃಶ್ಯ(ಎಎಫ್‌ಪಿ – ಸಂಗ್ರಹ ಚಿತ್ರ)   

ಐಲಾಟ್ (ಇಸ್ರೇಲ್): ಸಂಯುಕ್ತ ಅರಬ್‌ ಒಕ್ಕೂಟದ (ಯುಎಇ) ಜತೆಗೆ ಇಸ್ರೇಲ್‌ ಮಾಡಿಕೊಂಡಿರುವ ಪೈಪ್‌ಲೈನ್‌ ಮೂಲಕ ಕಚ್ಚಾತೈಲ ಸರಬರಾಜು ಮಾಡುವ ಐತಿಹಾಸಿಕ ಒಪ್ಪಂದದಿಂದ ಕೆಂಪು ಸಮುದ್ರದ ಅಪರೂಪದ ಹವಳದ ದಿಬ್ಬಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಇಸ್ರೇಲ್‌ ಪರಿಸರವಾದಿಗಳು ಎಚ್ಚರಿಸಿದ್ದಾರೆ.

ಕಳೆದ ವರ್ಷದ ಅಂತ್ಯದಲ್ಲಿ ಇಸ್ರೇಲ್‌–ಯುಎಇ ನಡುವ ಈ ಐತಿಹಾಸಿಕ ತೈಲ ಸರಬರಾಜು ಒಪ್ಪಂದ ನಡೆದಿತ್ತು. ಅದು ಜಾರಿಗೆ ಬರುವ ದಿನಗಳು ಸಮೀಪಿಸುತ್ತಿದ್ದಂತೆಯೇ ಪರಿಸರವಾದಿಗಳಿಂದ ಈ ಆಕ್ಷೇಪ ವ್ಯಕ್ತವಾಗಿದೆ.

ಟ್ಯಾಂಕರ್‌ನಿಂದ ಪೈಪ್‌ಲೈನ್‌ಗೆ ಕಚ್ಚಾತೈಲ ತುಂಬಿಸುವ ಸ್ಥಳದಿಂದ ಕೇವಲ 200 ಮೀಟರ್‌ ದೂರದಲ್ಲೇ ಹವಳದ ದಿಬ್ಬ ಇದೆ. ತೈಲ ಸೋರಿಕೆಯಿಂದ ದಿಬ್ಬಗಳಿಗೆ ತೊಂದರೆ ಆಗುವುದು ಮಾತ್ರವಲ್ಲ, ಮೇಲಿಂದ ಮೇಲೆ ಬರುವ ಟ್ಯಾಂಕರ್‌ಗಗಳಿಂಲೂ ಈ ಪ್ರದೇಶದಲ್ಲಿ ದಟ್ಟಣೆ ಉಂಟಾಗಿ ಈ ಅಪರೂಪದ ಕಡಲ ಜೀವಿಗಳಿಗೆ ತೊಂದರೆಯಾಗಲಿದೆ ಎಂದು ಪರಿಸರವಾದಿಗಳು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.