ಸಾಂದರ್ಭಿಕ ಚಿತ್ರ
– ರಾಯಿಟರ್ಸ್
ಜೆರುಸಲೇಂ: ಹಮಾಸ್ ಬಂಡುಕೋರರು ಒತ್ತೆಯಾಳುಗಳಾಗಿ ಇರಿಸಿಕೊಂಡಿರುವವರ ಬಿಡುಗಡೆಗೆ ಜನಪ್ರತಿನಿಧಿಗಳು ಗಂಭೀರ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿ ಒತ್ತೆಯಾಳುಗಳ ಸಂಬಂಧಿಕರು ಇಸ್ರೇಲ್ ಸಂಸತ್ ಸಮಿತಿಯ ಸಭೆಗೆ ನುಗ್ಗಿ, ಪ್ರತಿಭಟನೆ ನಡೆಸಿದರು.
ಹಮಾಸ್ ಬಂಡುಕೋರರು ಅ. 7ರಂದು ಇಸ್ರೇಲ್ ಮೇಲೆ ಹಠಾತ್ ದಾಳಿ ನಡೆಸಿ 253 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ನವೆಂಬರ್ ಕದನ ವಿರಾಮದ ವೇಳೆಯಲ್ಲಿ ಕೆಲವರನ್ನು ಅಲ್ಲಿಂದ ಕರೆತರಲಾಗಿದೆಯಾದರೂ, ಇನ್ನೂ 130 ಮಂದಿ ಒತ್ತೆಯಾಳುಗಳಾಗಿ ಅಲ್ಲಿಯೇ ಇದ್ದಾರೆ.
ಪ್ರತಿಭಟನೆಯಲ್ಲಿ ತೊಡಗಿದ್ದ ಮಹಿಳೆಯೊಬ್ಬರು, ಒತ್ತೆಯಾಳಾಗಿರುವ ತಮ್ಮ ಕುಟುಂಬದ ಮೂವರು ಸದಸ್ಯರ ಚಿತ್ರಗಳನ್ನು ಹಿಡಿದು, ಅವರ ಬಿಡುಗಡೆಗೆ ಮನವಿ ಮಾಡಿದರು. ಮೂವರಲ್ಲಿ ಒಬ್ಬರನ್ನಾದರೂ ಜೀವಂತವಾಗಿ ಕರೆತರುವಂತೆ ಅಂಗಲಾಚಿದರು.
ಸಮಿತಿಯ ಸಭೆಗೆ ನುಗ್ಗಿದ ಪ್ರತಿಭಟನಕಾರರು, ’ಅವರು ಅಲ್ಲಿ ಸಾಯುತ್ತಿರುವಾಗ ನೀವು ಇಲ್ಲಿ ಕುಳಿತುಕೊಳ್ಳಬಾರದು‘ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.