ADVERTISEMENT

ರಷ್ಯಾದಿಂದ ಚೀನಾಗೆ ಕೊಳವೆ ಮಾರ್ಗದಲ್ಲಿ ಅನಿಲ ಪೂರೈಕೆ: ಉಭಯ ರಾಷ್ಟ್ರಗಳ ಒಪ್ಪಂದ

ರಾಯಿಟರ್ಸ್
Published 4 ಸೆಪ್ಟೆಂಬರ್ 2025, 7:36 IST
Last Updated 4 ಸೆಪ್ಟೆಂಬರ್ 2025, 7:36 IST
<div class="paragraphs"><p>ರಷ್ಯಾದ ಕೊಳವೆ ಮಾರ್ಗದ ಕಾಮಗಾರಿ (ಸಂಗ್ರಹ ಚಿತ್ರ)</p></div>

ರಷ್ಯಾದ ಕೊಳವೆ ಮಾರ್ಗದ ಕಾಮಗಾರಿ (ಸಂಗ್ರಹ ಚಿತ್ರ)

   

ರಾಯಿಟರ್ಸ್ ಚಿತ್ರ

ವ್ಲಾಡಿವೊಸ್ಟೊಕ್‌: ಸೈಬಿರಿಯಾದಿಂದ ಅನಿಲ ಪೂರೈಕೆಗೆ ಸಂಬಂಧಿಸಿದ 2ನೇ ಯೋಜನೆಯ ಮಾರ್ಗ ಮತ್ತು ಪೂರೈಕೆಯ ಪ್ರಮಾಣ ಕುರಿತು ಚೀನಾ ಹಾಗೂ ರಷ್ಯಾ ಒಡಂಬಡಿಕೆಗೆ ಸಹಿ ಹಾಕಿವೆ ಎಂದು ರಷ್ಯಾದ ಸರ್ಕಾರಿ ಸ್ವಾಮ್ಯದ ಆರ್‌ಐಎ ಸುದ್ದಿ ಸಂಸ್ಥೆ ಗುರುವಾರ ವರದಿ ಮಾಡಿದೆ.

ADVERTISEMENT

ಈ ಕುರಿತು ರಷ್ಯಾದ ಇಂಧನ ಸಚಿವ ಸರ್ಗೀ ಸಿವಿಲೆವ್‌ ತಿಳಿಸಿರುವುದಾಗಿ ವರದಿಯಾಗಿದೆ.

ಈ ಒಡಂಬಡಿಕೆ ಪ್ರಕಾರ ಮಂಗೊಲಿಯಾ ಮಾರ್ಗದಲ್ಲಿ ಅನಿಲ ಕೊಳವೆ ಮಾರ್ಗ ಸಾಗಲಿದೆ. ವಾರ್ಷಿಕ 50 ಶತಕೋಟಿ ಘನ ಮೀಟರ್‌ ಅನಿಲ ಈ ಮಾರ್ಗದಲ್ಲಿ ಪೂರೈಕೆಯಾಗಲಿದೆ ಎಂದೆನ್ನಲಾಗಿದೆ.

ಚೀನಾ ಪ್ರವಾಸದ ಸಂದರ್ಭದಲ್ಲಿ ಈ ಬೃಹತ್ ಯೋಜನೆಯ ಒಡಂಬಡಿಕೆಗೆ ಪುಟಿನ್ ಸಹಿ ಹಾಕಿದ್ದಾರೆ. ಆದರೆ ಯೋಜನೆ ಕುರಿತ ಹಣಕಾಸು ಒಪ್ಪಂದದ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಿದೆ.

‘ನಮಗೆ ಆಯ್ಕೆಯ ಸ್ವಾತಂತ್ರವಿದೆ. ಹೀಗಾಗಿ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳ್ಳಲಿದೆ. ಅನುಮತಿಯನ್ನು ಈಗಾಗಲೇ ನೀಡಲಾಗಿದೆ. ಆದರೆ ಈ ಯೋಜನೆಯ ವಾಣಿಜ್ಯ ಭಾಗವನ್ನು ಇನ್ನಷ್ಟೇ ಚರ್ಚಿಸಬೇಕಿದೆ. ಇದು 2026ರ ಹೊತ್ತಿಗೆ ಅಂತಿಮಗೊಳ್ಳುವ ಸಾಧ್ಯತೆ ಇದೆ’ ಎಂದು ಸಿವಿಲೆವ್‌ ಹೇಳಿದ್ದಾರೆ.

‘ಸದ್ಯ ಇರುವ ಸೈಬಿರಿಯಾ 1 ಕೊಳವೆ ಮಾರ್ಗದ ಮೂಲಕ ಗರಿಷ್ಠ 38 ಶತಕೋಟಿ ಘನ ಮೀಟರ್ ಅನಿಲ ಪೂರೈಕೆಯಾಗುತ್ತಿದೆ. ಇದನ್ನು 44 ಶತಕೋಟಿ ಘನ ಮೀಟರ್‌ಗೆ ಹೆಚ್ಚಿಸಲು ಮಾಸ್ಕೊ ಮತ್ತು ಬೀಜಿಂಗ್ ಒಪ್ಪಂದ ಮಾಡಿಕೊಂಡಿವೆ. ಸಾಮರ್ಥ್ಯ ಹೆಚ್ಚಿಸಲು ಅಗತ್ಯವಿರುವ ವಿನ್ಯಾಸದ ಕೆಲಸ ಪ್ರಗತಿಯಲ್ಲಿದೆ. ಅದು ಪೂರ್ಣಗೊಂಡ ನಂತರ ಯೋಜನೆ ಅನುಷ್ಠಾನದ ದಿನಾಂಕವನ್ನು ತಿಳಿಸಲಾಗುವುದು’ ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.